ರಾಜ್ಯ

ನಾಮಫಲಕ ಅನಾವರಣ

Admin October 26, 2025 0

ವರದಿ ಎಸ್ಎನ್ ವೀರೇಶ

ಸಿಂಧನೂರು, ಅ 26

ಸಿಂಧನೂರು ನಗರದ ಪ್ರಮುಖ ಮತ್ತು ಹಳೆಯ ವೃತ್ತವಾದ ಇಂದಿರಾ ನಗರ ವೃತ್ತದ ನೂತನ ನಾಮಫಲ ಕವನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮತ್ತು ಸಮಾಜ ಸೇವಕರಾದ ಸೈಯದ್ ಹಾರೂನ್ ಪಾ ಷಾ ಜಾಹಂಗೀರದಾರ್ ಇವರು ನಾಮಫಲಕವನ್ನು

ಉದ್ಘಾಟಿಸಿದರು.

 

ಈ ಸಂದರ್ಭದಲ್ಲಿ ವೀರೇ ಶ ಭಾವಿಮನಿ, ಫಾರೂ ಕ್,ಹುಸೇನ್ ಬಾಷಾ, ಮು ದಿಯ ಡೈಮಂಡ್, ರಾಜಾ ಸಾಬ್,ಸರಾಫ್ ರಾಜ್ ಮಾಸ್ಟರ್,ರಾಜಾ ಹುಸೇನ್,ಸಾಧಿಕ್,ಸಾಹಿಲ್,ಲಿಂಗರಾಜ,ಮಹಮದ್,ಫೈಜಾ,ಸಮೀರ್,ಬೀಲಾಲ್,ಜಾವೀದ್ ಸೇರಿ ದಂತೆಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಹಿತೈಷಿ ಗಳು,ಇಂದಿರಾನಗರದ,ಹಿರಿಯರು,ಯುವ ಮುಖಂಡ ರು ಭಾಗವಹಿಸಿದ್ದರು.

Popular post
ರಾಜಕೀಯವಾಗಿ ಕಾಂಗ್ರೆಸನಿಂದ ಶಾಪಗ್ರಸ್ತ ಜಿಲ್ಲೆಯಾದ ಚಿಕ್ಕಮಗಳೂರು ..!!??

ವರದಿ : J .ಲಿಂಗರಾಜು. ರಾಜಕೀಯವಾಗಿ ಕಾಂಗ್ರೆಸ್ ನಿಂದ ಇಂದಿರಾ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಿದ ಜಿಲ್ಲೆ ನಮ್ಮ ಚಿಕ್ಕಮಗಳೂರಿಗೆ ಸಲ್ಲುತ್ತದೆ ,ಆದರೆ ಅದೇ ಪಕ್ಷವು ಇಂದು  ಚಿಕ್ಕಮಗಳೂರು ಜಿಲ್ಲೆ ಕಾಂಗ್ರೆಸ್ ಶಾಸಕರನ್ನುಅಸಡ್ಡೆಯಿಂದ ನೋಡುತ್ತಿದೆ. ಜಿಲ್ಲೆಗೆ ಕಾಂಗ್ರೆಸ್ ಪಕ್ಷವು ಮಂತ್ರಿ ಭಾಗ್ಯ ಕೊಟ್ಟು ಎರಡು ದಶಕಗಳೇ ಕಳೆಯುತ್ತಿದೆ, ಸಗೀರ್ ಅಹಮದ್,  ಮೋಟಮ್ಮ ನಂತರ ಜಿಲ್ಲೆಗೆ ಕಾಂಗ್ರೆಸ್ ಮಂತ್ರಿ ಭಾಗ್ಯವನ್ನು ಕರುಣಿಸಿಲ್ಲ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆ ಹಿಂದುತ್ವ ಮತ್ತು ದತ್ತ ಪೀಠದ ವಿಷಯದಲ್ಲಿ ರಾಜಕೀಯ ವಾಗಿ ಬದಲಾಗಿ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಿತ್ತು .2013ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ತರೀಕೆರೆ ಕ್ಷೇತ್ರ ಮಾತ್ರ ಕಾಂಗ್ರೆಸ್ ಗೆ ಒಲಿದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು, ಜಿಲ್ಲೆಯಲ್ಲಿದ್ದ ಏಕೈಕ ಕಾಂಗ್ರೆಸ್ ಶಾಸಕ ಜಿ, ಹೆಚ್, ಶ್ರೀನಿವಾಸ್ ರವರಿಗೂ ಕೂಡ ಯಾವುದೇ ಹುದ್ದೆ ನೀಡಿರಲಿಲ್ಲ ಇನ್ನು ಬದಲಾದ ರಾಜಕೀಯ ಸನ್ನಿವೇಶದಲ್ಲಿ 2023ರ ಚುನಾವಣೆಯಲ್ಲಿ ಜಿಲ್ಲೆಯ ಜನತೆ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಆಶೀರ್ವಾದ ಮಾಡಿದ್ದರು. ಅದರಲ್ಲಿ ಶೃಂಗೇರಿ ಶಾಸಕರಾದ ಟಿ,ಡಿ, ರಾಜೇಗೌಡರಿಗೆ  KREDL ಸಂಸ್ಥೆಯ ಚೇರ್ಮನ್ ಮಾಡಿದ್ದು ಬಿಟ್ಟರೆ ಕಾಂಗ್ರೆಸ್ ಜಿಲ್ಲೆಗೆ ಯಾವುದೇ ರಾಜಕೀಯ ಸ್ಥಾನಮಾನ ಮಾಡಿರುವುದಿಲ್ಲ. ಇನ್ನು ಜಿಲ್ಲೆಯ ರಾಜ್ಯ ಮುಖಂಡ ರಾದ ಬಿ,ಎಲ್ ಶಂಕರ್ ರವರಿಗೆ ಚಿತ್ರಕಲಾ ಪರಿಷತ್ ಅಧ್ಯಕ್ಷ ಸ್ಥಾನ  ಕೊಟ್ಟಿದ್ದು ಬಿಟ್ಟರೆ  ಕಾರ್ಯಕರ್ತರಿಗೆ ಕೆಲಸಕ್ಕೆ ಬಾರದ ಹುದ್ದೆ ಕರುಣಿಸಿರುತ್ತದೆ .ಪ್ರಸಕ್ತವಾಗಿ ಜಿಲ್ಲೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರಿದ್ದು ಅದರಲ್ಲಿ ಮೂರು ಜನ ನೂತನ ಶಾಸಕರು ಇರುತ್ತಾರೆ. ಕಾಂಗ್ರೆಸ್ನಂತ ಪಕ್ಷದಲ್ಲಿ ನೂತನ ಶಾಸಕರಿಗೆ ಸಚಿವ ಸ್ಥಾನವಿರಲಿ ನಿಗಮ ಮಂಡಳಿಗೂ ಕೂಡ ಹತ್ತಿರ ಬಿಟ್ಟುಕೊಳ್ಳುವುದಿಲ್ಲ ಇನ್ನು ಉಳಿದ ಶಾಸಕರೆಂದರೆ ತರೀಕೆರೆ ಕ್ಷೇತ್ರದ ಜಿ. ಹೆಚ್ ಶ್ರೀನಿವಾಸ .ಎರಡನೇ ಬಾರಿ ಶಾಸಕರಾಗಿರುವ ಶ್ರೀನಿವಾಸ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಆಪ್ತ ವಲಯದಲ್ಲಿ ಗುರುತಿಸಿ ಕೊಂಡಿರುತ್ತಾರೆ. ತಮ್ಮ ಆಪ್ತ ವಲಯದ ದಲ್ಲಿರುವ ಶ್ರೀನಿವಾಸ್ ರವರಿಗೆ ಸಿದ್ದರಾಮಯ್ಯನವರು ಈ ಬಾರಿ ಸಂಪುಟ ಪುನಾರಚನೆ ಸಮಯದಲ್ಲಿ ಆಶೀರ್ವಾದ ಮಾಡುತ್ತಾರಾ ಕಾದು ನೋಡಬೇಕು.,?? ಶ್ರೀನಿವಾಸ್ ರವರಿಗೆ ಜಿಲ್ಲಾ ಕೋಟ ನಿಂದ ಸಚಿವ ಸ್ಥಾನ ಸಿಗದಿದ್ದರೆ ಜಾತಿ ಕೋಟದಿಂದ ಸಚಿವ ಸ್ಥಾನ ಖಂಡಿತ ಸಿಗಲಾರದು ಕುರುಬ ಸಮುದಾಯದ ಕೋಟದಿಂದ ಕೊಪ್ಪಳದ ರಾಘವೇಂದ್ರ ಹಿಟ್ನಾಳ್ ಮತ್ತು ಹೊಸದುರ್ಗದ ಬಿ.ಜಿ ಗೋವಿಂದಪ್ಪ ಪ್ರಮುಖ ಸ್ಥಾನದಲ್ಲಿದ್ದಾರೆ ಆದ್ದರಿಂದ ಸಿದ್ದರಾಮಯ್ಯನವರು ಜಿಲ್ಲೆಗೆ ಮುಂದಿನ ಅವಧಿಗಾದರೂ ಜಿಲ್ಲೆಯ ಒಬ್ಬ ಶಾಸಕರನ್ನು ಮಂತ್ರಿ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸುತ್ತಾರೆಂದು ಜಿಲ್ಲೆಯ ಜನತೆ ಕಾದು ಕುಳಿತಿದೆ.

ತರೀಕೆರೆ ಪೊಲೀಸರ ಕಾರ್ಯಾಚರಣೆ ಇಬ್ಬರು ಮನೆಗಳ್ಳರ ಬಂಧನ.

ಮನೆ ಕಳ್ಳತನ ನಡೆದ ಎರಡೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ತರೀಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.  ದಿನಾಂಕ 19/ 11/ 2025ರಂದು ತರೀಕೆರೆ ತಾಲೂಕಿನ ಎರೆಹಳ್ಳಿ ಗ್ರಾಮದ ಆಶಾ ಎಂಬುವವರ ಮನೆಯ ಮೇಲ್ಚಾವಣಿ ಮುರಿದು 96 ಗ್ರಾಂ ಚಿನ್ನ ಮತ್ತು 8000 ನಗದು ಕಳ್ಳತನವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅದೇ ಗ್ರಾಮದ ರಾಮಕೃಷ್ಣ ಮತ್ತು ಮೇಘರಾಜ್ ಎಂಬ ಕಳ್ಳರನ್ನು ಪತ್ತೆ ಮಾಡಿ ಅವರಿಂದ ಒಂಬತ್ತು ಲಕ್ಷದ 63 ಸಾವಿರ ಮೌಲ್ಯದ ಚಿನ್ನಾಭರಣ ಮತ್ತು 4, 400 ಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಈ ಕಾರ್ಯಚರಣೆಯಲ್ಲಿ ತರೀಕೆರೆ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್, ಪಿಎಸ್ಐ ಗಳಾದ ಮಂಜುನಾಥ್ ಮನ್ನಂಗಿ, ದೇವೇಂದ್ರ ರಾಥೋಡ್, ಹಾಗೂ ಸಿಬ್ಬಂದಿಗಳಾದ ರಾಮಪ್ಪ, ರುದ್ರೇಶ್, ರಿಯಾಜ್, ಧನಂಜಯ ಸ್ವಾಮಿ, ಶ್ರೀನಿವಾಸ್, ರವರು ಭಾಗವಹಿಸಿದ್ದರು. ಈ ಕಾರ್ಯಚರಣೆಯನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಅಧಿಕ್ಷಕರಾದ ವಿಕ್ರಮ ಅಮಟೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಟಿ ಜಯಕುಮಾರ್ ಮತ್ತು ತರೀಕೆರೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷರಾದ ಪರಶುರಾಮಪ್ಪ ನವರು ಶ್ಲಾಘಿಸಿದ್ದಾರೆ.

ಅಂಚೆ ಕಚೇರಿಯಲ್ಲಿ ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ

ತರಿಕೆರೆ: ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ಮಕ್ಕಳು ಅಂಚೆ ಕಚೇರಿಯ ಬಗ್ಗೆ ತಿಳಿದುಕೊಳ್ಳಲು ತರೀಕೆರೆಯ ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿದರು. ಆರರಿಂದ, ಹತ್ತನೇ ತರಗತಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ತೆರಳಿ, ಅಂಚೆ ಕಚೇರಿಯ ಪತ್ರ ವ್ಯವಹಾರ, ಠೇವಣಿ, ಇನ್ಸೂರೆನ್ಸ್, ಮನಿ ಆರ್ಡರ್, ಉಳಿತಾಯ ಖಾತೆ, ಸುಕನ್ಯಾ ಸಮೃದ್ಧಿ ಯೋಜನೆ ಯ ,ಸಂಪೂರ್ಣ ಮಾಹಿತಿ ಪಡೆದುಕೊಂಡರು . ದೀಪಾವಳಿ ಹಬ್ಬದ ಶುಭಾಶಯ ಕೋರುವ ಆಕರ್ಷಕ ಗ್ರೀಟಿಂಗ್ ಕಾರ್ಡ್ ಗಳನ್ನು ಮಕ್ಕಳು ಸ್ವತಃ ತಯಾರಿಸಿ ಅವುಗಳನ್ನು ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕರ್ನಾಟಕ ರಾಜ್ಯಪಾಲರಿಗೆ ಶುಭಾಶಯ ಕೋರಿ ಅಂಚೆ ಮೂಲಕ ಕಳುಹಿಸಿಕೊಟ್ಟರು . ಶಾಲೆಯ ಪ್ರಾಂಶುಪಾಲರಾದ ಕಾರ್ತಿಕೇಯನ್, ಶಿಕ್ಷಕರಾದ ತೇಜಸ್ವಿ ಕುಮಾರ್, ಅನಿತಾ, ಸುಪ್ರಿಯ ಗೌಸ್ ಅಹಮದ್ ಗಿರೀಶ್ ಹಾಗೂ ಅಂಚೆ ಕಚೇರಿಯ ಪ್ರಭಾರ ಪೋಸ್ಟ್ ಮಾಸ್ಟರ್ ಅನಿತಾ ಹಾಗೂ ಕಚೇರಿ ಸಿಬ್ಬಂದಿಯಾದ ಶಿವಣ್ಣ ಮುಂತಾದವರು ಹಾಜರಿದ್ದರು

ಮೈ ದುಂಬಿಹರಿಯುತಿರುವ ಜಂಬದಹಳ್ಳ ಜಲಾಶಯಕ್ಕೆ ಬಾಗಿನ ಸಮರ್ಪಣೆ

ಮೈ ದುಂಬಿಹರಿಯುತಿರುವ ಜಂಬದಹಳ್ಳ ಜಲಾಶಯಕ್ಕೆ ಶಾಸಕರಾದ G.H ಶ್ರೀನಿವಾಸ ರವರಿಂದ ಬಾಗಿನ ಸಮರ್ಪಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಮುಖಂಡರಾದ ಟಿ. ಎನ್. ಜಗದೀಶ್, ದರ್ಶನ್ duglapura, ರವಿ ಶಾಂತಿಪುರ, ಮತ್ತು ಸಿದ್ದರಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

ದೋರನಾಳು ಗ್ರಾಮದಲ್ಲಿ ಐ.ಡಿ.ಬಿ.ಐ ಬ್ಯಾಂಕ್ ನಿಂದಕೃಷಿ ಸಾಲ ಮೇಳ.

ತರೀಕೆರೆಯ ಐ.ಡಿ.ಬಿ.ಐ ಬ್ಯಾಂಕ್ ವತಿಯಿಂದ ದಿನಾಂಕ 8 12 2025 ರಂದು ದೋರನಾಳು ಗ್ರಾಮ ಬಯಲು ರಂಗ ಮಂದಿರದಲ್ಲಿ ದಲ್ಲಿ ರೈತರಿಗೆ ಕೃಷಿ ಸಾಲ ಮೇಳವನ್ನು ಏರ್ಪಡಿಸಲಾಗಿದೆ ಎಂದು ಐ.ಡಿ.ಬಿ.ಐ ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀ ಶಿವನಗೌಡ ಬಿರಾದರ್ ರವರು ತಿಳಿಸಿದ್ದಾರೆ.  ಕೃಷಿ ಸಾಲ ಮೇಳ ದಲ್ಲಿ ರೈತರಿಗೆ ಆಕರ್ಷಕ ಬಡ್ಡಿ ದರದಲ್ಲಿ ಬೆಳೆ ಸಾಲ, ವಾಹನ ಸಾಲ ,ಉಗ್ರಾಣ ಸಾಲ, ಸಂಸ್ಕರಣ ಘಟಕ ಸಾಲ, ಡೆವಲಪ್ಮೆಂಟ್ ಸಾಲ, ವನ್ನು ಸುಲಭ ಮತ್ತು ತ್ವರಿತ ಗತಿಯಲ್ಲಿ ನೀಡಲಾಗುವುದು ಆಸಕ್ತ ರೈತರು ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ರಾಜ್ಯ

View more
ಕಾರುಣ್ಯ ಆಶ್ರಮ ಬುದ್ಧಿ ಮಾಂದ್ಯ ಮತ್ತು ನಿರಾಶ್ರಿ ತರ ದೇವಾಲಯ :ಚಮನ್ ಸಾಹೇಬ್.

ವರದಿ. ಎಸ್. ಎನ್ ವೀರೇಶ ಸಿಂಧನೂರು,ನ 07 ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂ ಕಿನ ಜನನಿ ಪುಷ್ಪಕಲಾ ಯುವಕ ಸಂಘ ಹ್ಯಾರಡ ವತಿಯಿಂದ ಸಿಂಧನೂರಿನ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿ ಮಾಂಧ್ಯ ಆಶ್ರಮದಲ್ಲಿ ಸಂ ಗೀತ ಕಾರ್ಯಕ್ರಮ ನೆರವೇ ರಿತು. ಈ ಕಾರ್ಯಕ್ರಮದ ಲ್ಲಿ ಆಶ್ರಮದಲ್ಲಿರುವ ವಯ ಸ್ಕರ ಬುದ್ಧಿಮಾಂದ್ಯರು ಹಾ ಗೂ ವೃದ್ಧಬುದ್ಧಿಮಾಂದ್ಯರು ಕಲಾವಿದರೊಂದಿಗೆಕುಣಿದು ಕುಪ್ಪಳಿಸಿ ಸಂತೋಷ ಗೊಂಡರು.ಈ ಕಾರ್ಯಕ್ರ ಮದಲ್ಲಿ ಜನನಿ ಪುಷ್ಪಕಲಾ ಯುವಕ ಮಂಡಳಿಯ ಸಂ ಸ್ಥಾಪಕರಾದ ಪಿ. ಚಮನ್ ಸಾಹೇಬ್ ಅವರನ್ನು ಒಳ ಗೊಂಡಂತೆ ಎಲ್ಲಾ ಕಲಾವಿ ದರನ್ನು ಆಶ್ರಮದ ವತಿ ಯಿಂದಗೌರವಿಸಲಾಯಿತು ನಂತರ ಕಲಾವಿದರಾದ ಚಮನ್ ಸಾಹೇಬ್ ಮಾತ ನಾಡಿ ಕಾರುಣ್ಯ ಆಶ್ರಮದ ಲ್ಲಿರುವಆಶ್ರಯದಾತರುಗಳನ್ನು ಇಲ್ಲಿನ ಸಿಬ್ಬಂದಿಗಳು ಕೂಸುಗಳು ಎಂದಾಗನಾವೆ ಲ್ಲರೂ ಕೂಡ ಭಾವನಾತ್ಮಕ ವಾದೆವು.ನಮ್ಮ ಭಾರತೀ ಯ ಸಂಸ್ಕೃತಿ ಸಂಸ್ಕಾರವ ನ್ನು ಉಳಿಸುವ ನಿಟ್ಟಿನಲ್ಲಿ ಕಾರುಣ್ಯಾಶ್ರಮವು ಜನರ ಲ್ಲಿ ಹೆತ್ತವರನ್ನು‌ ಮಕ್ಕಳಾ ದವರು ನೋಡಿಕೊಳ್ಳಲೇ ಬೇಕು ಎನ್ನುವ ಅಭಿಯಾ ನಗಳು ನಾವು ಕಂಡಿರುವ ಅಂತಹ ಸಂಸ್ಥೆಗಳಲ್ಲಿ ಇದು ಪ್ರಥಮ ಸಂಸ್ಥೆಯಾಗಿದೆ.    ನಮ್ಮ ವಿಜಯನಗರ ಜಿಲ್ಲೆ ಯ ಪ್ರತಿಯೊಬ್ಬ ಕಲಾವಿದ ರ ಮನಸ್ಸಿನಲ್ಲಿ ಕಾರುಣ್ಯ ಕುಟುಂಬವು ದೇವಸ್ಥಾನ ದಂತಿದೆ. ಇಂದು ಈ ದೇವ ಸ್ಥಾನಕ್ಕೆ ನಾವು ಬಂದುಇಲ್ಲಿ ರುವಂಥ ಎಲ್ಲಾ ದೇವರುಗ ಳ ಆಶೀರ್ವಾದವನ್ನು ಸ್ವೀಕ ರಿಸಿದಾಗ ನಮ್ಮ ಜೀವನ ಪಾವನವಾಯಿತು ಎಂದು ನನ್ನ ಮನಸ್ಸಿಗೆ ಅನಿಸಿದೆ. ಬಡ ಕುಟುಂಬದ ಅರ್ಚ ಕರಾದ ವೇ.ಮೂ. ಅಮರ ಯ್ಯ ಸ್ವಾಮಿ ಅವರು ನಮ್ಮೆ ಲ್ಲರ ನಡೆದಾಡುವ ದೇವ ರಾಗಿದ್ದಾರೆ. ಏಕೆಂದರೆ ಅವ ರ ಸರಳ ವ್ಯಕ್ತಿತ್ವ ಅವರಿಗಿ ರುವ ಸಮಾಜ ಪರ ಕಾಳ ಜಿ ತಮ್ಮ ಕುಟುಂಬಕ್ಕೆ ಮಾ ರ್ಗದರ್ಶನ ನೀಡಿ ಈ ಕು ಟುಂಬದ ಪ್ರತಿಯೊಬ್ಬ ಸದ ಸ್ಯರು ಕೂಡ ಸಮಾಜಕ್ಕೆ ತಮ್ಮನ್ನು ತಾವು ಮೀಸಲಿ ಟ್ಟಿರುವುದು ಮಾನವೀಯ ತೆಯ ಮೌಲ್ಯಗಳಿಗೆ ಬೆಲೆ ಸಿಕ್ಕಂತಾಗಿದೆ. ಮತ್ತು ಗದು ಗಿನ ಲಿಂಗಕ್ಕೆ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಆಶಯದಂತೆ ಕಾರುಣ್ಯ ಕುಟುಂಬದ ಸೇವೆ ನೆರವೇ ರುತ್ತಿದೆ.ನಾವು ಸಿಂಧನೂರಿ ಗೆ ಬಂದು ಇಲ್ಲಿರುವ ಎಲ್ಲಾ ಹಿರಿಯರಬುದ್ಧಿಮಾಂದ್ಯರಿಗೆ ಸಂಗೀತ ಸೇವೆಯನ್ನು ಒದಗಿಸಬೇಕೆನ್ನುವುದು ನಮ್ಮೆಲ್ಲಾ ಕಲಾವಿದರ ಆಸೆಯಾಗಿತ್ತು.ಅದು ಇಂದು ನೆರವೇರಿರುವುದು ಪ್ರತಿಯೊಬ್ಬ ಕಲಾವಿದರಿ ಗೂ ಕೂಡ ಸಂತೋಷವ ನ್ನುಂಟು ಮಾಡಿದೆ. ನಾನು ನನ್ನದು ನನ್ನಿಂದಲೇ ಎನ್ನು ವ ಈ ಸ್ವಾರ್ಥ ಜಗತ್ತಿನಲ್ಲಿ ನಿಸ್ವಾರ್ಥತೆಯ ಸೇವೆ ಮಾ ಡುತ್ತಿರುವ ಕಾರುಣ್ಯ ಆಶ್ರ ಮವು ನಮ್ಮ ಕರುನಾಡ ಅಲ್ಲದೆ ನಮ್ಮ ದೇಶದ ಕರು ಣೆಯ ಕುಟುಂಬವಾಗಿದೆ ಎಂದು ನಾವೆಲ್ಲರೂ ಹೆಮ್ಮೆ ಯಿಂದಹೇಳಿಕೊಳ್ಳುತ್ತಿದ್ದೇವೆ ಎಂದು ಮಾತನಾಡಿದ ರು, ಬಹಳ ಅರ್ಥಪೂರ್ಣ ವಾದಂತಹಪದಗಳೊಂದಿಗೆ ಸಂಗೀತದೊಂದಿಗೆ ಆಶ್ರ ಯದಾತರುಗಳನ್ನು ರಂಜಿಸಿ ದರು. ಈ ಸಂಗೀತ ಕಾರ್ಯ ಕ್ರಮದಲ್ಲಿ ಕಲಾವಿದರುಗ ಳಾದ ಹುಲುಗಪ್ಪ ಬಂಡೆ ಹಳ್ಳಿ. ಕೆ.ಸೈಫುಲ್ಲಾ ಮರಿಯ ಮ್ಮನಹಳ್ಳಿ. ಹನುಮಯ್ಯ ಕೆ.ವೆಂಕಟಪುರ. ಮಂಜು ನಾಥ.ಬಿ.ಎಸ್.ತುಮಕೂರು. ಎಂ.ಭೀಮಪ್ಪ ಹ್ಯಾರ ಡ. ಶೌಕತ್ ಅಲಿ ಹ್ಯಾರಡ. ಹಾವನೂರು ಲಿಂಗಪ್ಪ ಹ್ಯಾ  ರಡ. ಮಮತಾ ಕೆ.ಎಸ್ ತುಮಕೂರು. ಮೈದೂರು ಶಿಲ್ಪಾ ಬೆಣಕಲ್. ಹಾಗೂ ಆಶ್ರಮದಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯ ಸ್ವಾಮಿ ಹಿರೇಮಠ.ಆಶ್ರಮ ದ ಸಿಬ್ಬಂದಿಗಳಾದ ಸುಜಾ ತ ಮಲ್ಲದಗುಡ್ಡ. ಸಿದ್ಧಯ್ಯ ಸ್ವಾಮಿ. ಮರಿಯಪ್ಪ.ಜ್ಯೋ ತಿ.ಹಾಗೂ ಅನೇಕರು ಭಾಗವಹಿಸಿದ್ದರು.

Admin November 7, 2025 0

ನಾಮಫಲಕ ಅನಾವರಣ

ನಾಳೆಯಿಂದ ಕಲ್ಯಾಣ ಕರ್ನಾಟಕ ಪ್ರೀಮಿ ಯರ್‌ ಲೀಗ್‌‌ ಕ್ರಿಕೆಟ್ ಪಂದ್ಯಾವಳಿ ಆರಂಭ.

ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಗೌರವ ಸಮಾರ್ಪಣೆ

ಬಸನಗೌಡ ಬಾದರ್ಲಿ ಜನ ಸ್ಪಂದನ ಕಾರ್ಯಾಲಯ ದಲ್ಲಿ ದೀಪಾವಳಿ ಹಬ್ಬದ ಪೂಜಾ ಸಮಾರಂಭ.

    ಸಿಂಧನೂರು ಅ:19 ನಗರದ ಬಸವ ನಗರದಲ್ಲಿ ರುವ ಎಂ.ಎಲ್.ಸಿ ಬಸನ ಗೌಡ ಬಾದರ್ಲಿ ಅವರ ಜನ ಸ್ಪಂದನ ಕಾರ್ಯಾಲ ಯದಲ್ಲಿ ದೀಪಾವಳಿ ಹಬ್ಬ ದ ಪೂಜಾ ಸಮಾರಂಭ ಕಾರ್ಯಕ್ರಮದಲ್ಲಿ ಸಿಂಧ ನೂರು ತಾಲೂಕಿನ ಹರ ಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಮಹಾ ಗಣಪತಿ, ಮಹಾಲಕ್ಷ್ಮಿ, ಮಹಾ ಸರಸ್ವತಿ ಪೂಜಾ ಕಾರ್ಯಕ್ರಮ ವಿಶೇಷ ಪೂಜಾ ಕಾರ್ಯಕ್ರಮ ವಿಧಿ ವಿಧಾನಗಳಿಂದ ನೆರವೇರಿತು.  ಈ ಕಾರ್ಯಕ್ರಮದಲ್ಲಿ ಲೋಕಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆ ಮಾಡ ಲಾಯಿತು. ಈ ಪೂಜಾ ಸಮಾರಂಭ ಕಾರ್ಯಕ್ರ ಮದ ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದ ಯದ್ದ ಲದೊಡ್ಡಿಯ ಸುವರ್ಣಗಿರಿ ವಿರಕ್ತ ಮಠದ ಮಹಾಲಿಂಗ ಮಹಾಸ್ವಾಮಿಗಳು ದೀಪಾ ವಳಿ ಹಬ್ಬವು ಎಲ್ಲರ ಜೀವ ನದಲ್ಲಿ ಬೆಳಕು ಹೊಸ ಬೆಳ ಕನ್ನು ಚೆಲ್ಲಿ ಪ್ರತಿಯೊ ಬ್ಬರ ಜೀವನದಲ್ಲಿ ಕತ್ತಲೆಮಾಯ ವಾಗಿ ಪ್ರತಿಯೊಬ್ಬರೂ ಕೂಡ ಸಮಾಜಕ್ಕೆ ಸ್ಪೂರ್ತಿ ಯಾಗಲಿ ಪ್ರತಿ ವರ್ಷವೂ ಕೂಡ ಬಸನಗೌಡ ಬಾದರ್ಲಿ ಅವರು ಲೋಕ ಕಲ್ಯಾಣಾರ್ಥವಾಗಿ ಹಮ್ಮಿ ಕೊಳ್ಳುವಂತಹ ಈಪೂಜಾ ಕಾರ್ಯಕ್ರಮ ಸಿಂಧನೂರು ತಾಲೂಕಿನ ಸಮಸ್ತ ರೈತ ಬಾಂಧವರುಗಳ ಮತ್ತು ವ್ಯವಹಾರಸ್ಥರ ಅಧಿಕಾರಿ ಗಳ ಯುವಕರ ಹಾಗೂ ಮಹಿಳೆಯರಿಗೆ ಚೈತನ್ಯ ತುಂಬಲಿ ಎನ್ನುವ ಆಶಯ ನಮ್ಮ ಬಸನಗೌಡ ಬಾದ ರ್ಲಿ ಅವರದು ಮುಂದಿನ ದಿನಮಾನಗಳಲ್ಲಿ ಬಸನ ಗೌಡರು ಕಂಡಂತಹ ಕನ ಸು ನನಸಾಗಲಿ, ಸಿಂಧನೂ ರು ತಾಲೂಕಿನ ಹಾಗೂ ರಾಜ್ಯದ ದೊಡ್ಡಮಟ್ಟದ ಯುವ ನಾಯಕನಾಗಿ ಬೆಳೆ ಯಲಿ ಎಂದು ಕಲ್ಯಾಣ ಕರ್ನಾಟಕದ ಹರ ಗುರು ಚರ ಮೂರ್ತಿಗಳ ಆಶೀ ರ್ವಾದವಾಗಿದೆ. ಮತ್ತು ನಮ್ಮ ಸಂಸ್ಕೃತಿ ಸಂಸ್ಕಾ ರವನ್ನು ಉಳಿಸುವ ನಿಟ್ಟಿನ ಲ್ಲಿ ಬಸನಗೌಡ ಬಾದರ್ಲಿ ಅವರ ಕುಟುಂಬ ಪಣ ತೊಟ್ಟಿರುವುದು ಮಾನವೀ ಯ ಧರ್ಮಕ್ಕೆ ಮೌಲ್ಯ ತಂದಂತಾಗಿದೆ ಎಂದು ಆಶೀರ್ವಚನ ನೀಡುವ ಮೂಲಕ ಬಸನಗೌಡ ಬಾದರ್ಲಿ ಕುಟುಂಬಕ್ಕೆ ಆಶೀರ್ವದಿಸಿದರು.    ಈ ವೇಳೆ ಶ್ರೀಮ. ನಿ. ಪ್ರ. ಬಸವಲಿಂಗ ಮಹಾ ಸ್ವಾ ಮಿಗಳು ಸುವರ್ಣಗಿರಿ ವಿರಕ್ತಮಠ ಒಳಬಳ್ಳಾರಿ. ಶ್ರೀ ಮ. ನಿ. ಪ್ರ. ಸಿದ್ಧ ಬಸ ವ ಮಹಾಸ್ವಾಮಿಗಳು ಬಳಗಾನೂರು, ಶ್ರೀ ಮಠ ಶ್ರೀ ಷ.ಬ್ರ. ಸೋಮನಾಥ ಶಿವಾಚಾರ್ಯ, ಮಹಾ ಸ್ವಾಮಿಗಳು . ಶ್ರೀಮದ್ ಜಗದ್ಗುರು ರಂಭಾಪುರಿ ಶಾಖಾಮಠ ಮೂರನೇ ಮೈಲ್ ಕ್ಯಾಂಪ್ ಕನ್ನೂರು, ಶ್ರೀಮ.ನಿ. ಪ್ರ.ತೊಂಟ ದಾರ್ಯ ಮಹಾಸ್ವಾಮಿ ಗಳು, ಅಡವಿ ಅಮರೇಶ್ವರ ಸುಕ್ಷೇತ್ರ. ಶ್ರೀ ಸದಾನಂದ ಶರಣರು ಸಿದ್ದಾಶ್ರಮ, ಬಂ ಗಾರಿ ಕ್ಯಾಂಪ್. ಕಲ್ಲೂರು ಶ್ರೀಗಳು ಮತ್ತು ಚಿದಾನಂ ದಯ್ಯ ಗುರುವಿನ್ ಶ್ರೀ ಅಮೋಘಸಿದ್ದೇಶ್ವರ ಮಠ ತುರುವಿಹಾಳ. ಮಲ್ಲಯ್ಯ ತಾತನವರು ಜ್ಯೋತಿ ರ್ಲಿಂ ಗ ಮಠ ಗೋನವಾರ. ಹಾಗೂ ಅಪಾರ ಅಭಿ ಮಾನಿ ಬಳಗ ಭಾಗವಹಿ ಸಿದ್ದರು.

Admin October 21, 2025 0

ಆರ್ ಎಸ್ ಎಸ್ ವಿಚಾರ ಬಿಡಿ, ಅಭಿವೃದ್ಧಿ ಕಡೆ ಗಮನ ಕೊಡಿ... ಸಿರಾಜ್ ಪಾಷಾ ಬೇಸರ.

ಕರವೇ ನೂತನ ಪದಾಧಿಕಾರಿಗಳ ನೇಮಕ.

ಜನಸ್ಪಂದನ ಕಛೇರಿಗೆ ಭೇಟಿ ನೀಡಿದ ವಿಧಾನಪರಿ ಷತ್ ವಿರೋಧ ಪಕ್ಷದ ಮುಖ್ಯ ಸಚೇತ ಕರಾದ ಸಲೀಂ ಅಹ್ಮದ

ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ- ವೆಂಕಣ್ಣ ಜೋಶಿ

    ಸಿಂಧನೂರು- 17 ಪ್ರತಿಯೊಬ್ಬರ ಜೀವನದಲ್ಲಿ ಸದವಕಾಶ ಬಂದೇ ಬರುತ್ತ ದೆ ಬಂದ ಸಮಯವನ್ನು ಸದ್ಭಳಕೆ ಮಾಡಿಕೊಂಡು ಪ್ರಗತಿಯ ಹಾದಿಯಲ್ಲಿ ಸಾಗಬೇಕು ಈ ನಿಟ್ಟಿನಲ್ಲಿ ಖ್ಯಾತ ಹಾಸ್ಯ ಕಲಾವಿದ ರಾಜುತಾಳಿಕೋಟಿಯವರು ತಮ್ಮ ಹಾಸ್ಯದ ಮೂಲ ಕ ಜನರ ಮನಸ್ಸು ಗೆದ್ದಿದ್ದಾ ರೆ ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಭೀಮನ ಕೆಲ ಸನ್ನಿವೇಶ ಗಳನ್ನು ಹೇಳಿ ಪ್ರೇಕ್ಷಕರನ್ನು ರಂಜಿಸಿದರು. ನಗರದ ಆದಿಶೇಷನ ಗುಡಿ ಹತ್ತಿರವಿರುವ ಶೇಖ್ ಬಷೀರ್ ಏತ್ಮಾರಿ ಅವರ ಮನೆಯ ಹತ್ತಿರ ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆ ರಾಯಚೂರು ಹಾಗೂ ಸದ್ಭಾವನಾ ವೇದಿಕೆ ಸಿಂಧನೂರು ಸಹಯೋಗ ದಲ್ಲಿ ಆಯೋಜನೆ ಮಾಡಿ ದ ದಿವಗಂತ ರಾಜು ತಾಳಿ ಕೋಟಿ ಅವರ ನುಡಿ ನಮ ನ ಕಾರ್ಯಕ್ರಮದಲ್ಲಿಮಾತ ನಾಡಿದರು. ರಾಯಚೂರು ಭಾವೖಕ್ಯ ಶಾಂತಿ ಸಂಸ್ಥೆ ಜಿಲ್ಲಾಧ್ಯಕ್ಷ ಪಂಪಯ್ಯಸ್ವಾಮಿ ಸಾಲಿ ಮಠ ಅಂತರಗಂಗಿ ಪ್ರಾಸ್ತಾವಿಕದಲ್ಲಿ ಖ್ಯಾತ ಹಾಸ್ಯ ಕಲಾವಿದ ರಾಜು ತಾಳಿಕೋಟಿ ಅವರ ಜೀವ ನದಲ್ಲಿ ರಂಗಭೂಮಿಗಾಗಿ ಶ್ರಮಿಸಿದವರು ಕಲಿಯುಗ ದ ಕುಡುಕ ಎನ್ನುವ ಹಾಸ್ಯ ರಸಾಯನದ ಮೂಲಕ ಜನಮಾನಸದಲ್ಲಿ ಉಳಿದು ಕೊಂಡಿದ್ದಾರೆ. ಹದಿನಾರು ಸಿನಮದಲ್ಲಿ ನಟಿಸಿದ್ದಾರೆ. ಸಿಂಧನೂರು ಅಳಿಯ ರಾಜು ತಾಳಿಕೋಟಿ ಎಂದರು.   ಹಿರಿಯ ಕಲಾವಿದರಾದ ಇಸ್ಮಾಯಿಲ್ ಸಾಬ. ಜಾನಿ ಸಾಬ ಕಂಡಕ್ಟರ್. ಎಸ್ ಎಮ್ ಖಾದ್ರಿ. ಭಕ್ಷೀ ಧರ ವೇಶ. ಶ್ಯಾಮಿದಸಾಬ ಕಂದಗಲ್. ಈಶಪ್ರಭು ಶಿಕ್ಷಕರು. ಶೇಖ್ ಬಷೀರ್ ಏತ್ಮಾರಿ. ಬಸವರಾಜ ಬಾದರ್ಲಿ. ಸಿದ್ದನಗೌಡ ಕಕ್ಕರಗೋಳ. ಗುಂಡು ರಾ ವ್ ಚನ್ನಳ್ಳಿ. ಹನಮಂತ ಆಚಾರ್ಯ ಮಸ್ಕಿ ಮತ್ತಿ ತರರು ಉಪಸ್ಥಿತರಿದ್ದರು.

Admin October 17, 2025 0

ರಾಜಕೀಯವಾಗಿ ಕಾಂಗ್ರೆಸನಿಂದ ಶಾಪಗ್ರಸ್ತ ಜಿಲ್ಲೆಯಾದ ಚಿಕ್ಕಮಗಳೂರು ..!!??

0 Comments