ಸ್ಥಳೀಯ

ದೋರನಾಳು ಗ್ರಾಮದಲ್ಲಿ ಐ.ಡಿ.ಬಿ.ಐ ಬ್ಯಾಂಕ್ ನಿಂದಕೃಷಿ ಸಾಲ ಮೇಳ.

ತರೀಕೆರೆಯ ಐ.ಡಿ.ಬಿ.ಐ ಬ್ಯಾಂಕ್ ವತಿಯಿಂದ ದಿನಾಂಕ 8 12 2025 ರಂದು ದೋರನಾಳು ಗ್ರಾಮ ಬಯಲು ರಂಗ ಮಂದಿರದಲ್ಲಿ ದಲ್ಲಿ ರೈತರಿಗೆ ಕೃಷಿ ಸಾಲ ಮೇಳವನ್ನು ಏರ್ಪಡಿಸಲಾಗಿದೆ ಎಂದು ಐ.ಡಿ.ಬಿ.ಐ ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀ ಶಿವನಗೌಡ ಬಿರಾದರ್ ರವರು ತಿಳಿಸಿದ್ದಾರೆ.  ಕೃಷಿ ಸಾಲ ಮೇಳ ದಲ್ಲಿ ರೈತರಿಗೆ ಆಕರ್ಷಕ ಬಡ್ಡಿ ದರದಲ್ಲಿ ಬೆಳೆ ಸಾಲ, ವಾಹನ ಸಾಲ ,ಉಗ್ರಾಣ ಸಾಲ, ಸಂಸ್ಕರಣ ಘಟಕ ಸಾಲ, ಡೆವಲಪ್ಮೆಂಟ್ ಸಾಲ, ವನ್ನು ಸುಲಭ ಮತ್ತು ತ್ವರಿತ ಗತಿಯಲ್ಲಿ ನೀಡಲಾಗುವುದು ಆಸಕ್ತ ರೈತರು ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

Admin December 6, 2025 0
ಗ್ರಾಮ ಪಂಚಾಯತ್ ಸಿಬ್ಬಂದಿಗಳ ಪಡಿತರ ಚೀಟಿ ರದ್ದಾಗದಂತೆ ಶಾಸಕರಿಗೆ ಮನವಿ.

ತರೀಕೆರೆ: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವೃಂದದ ಸಿಬ್ಬಂದಿಗಳು ತರೀಕೆರೆ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ,ತಮ್ಮ ಕುಟುಂಬದವರ ಪಡಿತರ ಚೀಟಿಗಳನ್ನು ರದ್ದುಪಡಿಸದಂತೆ ಶಾಸಕ ಜಿ.ಎಚ್ ಶ್ರೀನಿವಾಸ್ ರವರಿಗೆ ಪಂಚಾಯಿತಿ ನೌಕರರು ಮನವಿ ಮಾಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವರ ಬಳಿ ಮಾತನಾಡುವಂತೆ ಹಾಗೂ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಈ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು ಮತ್ತೊಮ್ಮೆ ಸಚಿವರ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಾಗುವುದೆಂದು ತಿಳಿಸಿದರು.

Admin November 24, 2025 0
ರೋಗಿಗಳಿಗೆ ಸಿಹಿ ಹಂಚಿ ಜನ್ಮ ದಿನಾಚರಣೆ ಆಚರಿಸಿದ ಹಾಲುಮಠ ದ ಸ್ವಾಮೀಜಿ....

 ತರೀಕೆರೆ,- ನ, 22 -- ಸಮಸ್ತ ನಾಗರಿಕ ಜನತೆಗೆ ಆಯುರ ಆರೋಗ್ಯ ಮತ್ತು ಸುಖ ಶಾಂತಿ , ಆ ಪರಮಾತ್ಮ ಕರುಣಿಸಲಿ ಎಂದು ಶುಭ ಹಾರೈಸಿದ ಹಾಲು ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು ಎಲ್ಲಾ ರೋಗಿಗಳು ಶೀಘ್ರವಾಗಿ ಗುಣಮುಖರಾಗಬೇಕು ಎಂದು ಹಾರೈಸಿದರು. ಅವರು ಇಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮ ಜನ್ಮದಿನದ ಪ್ರಯುಕ್ತ ರೋಗಿಗಳಿಗೆ ಬ್ರೆಡ್ಡು, ಬಿಸ್ಕೆಟ್, ಹಣ್ಣು, ಸಿಹಿ ಮತ್ತು ನೀರು ವಿತರಿಸಿದರು. ಈ ಸಂದರ್ಭದಲ್ಲಿ ಡಾಕ್ಟರ್ ದೇವರಾಜ್ ಮಾತನಾಡಿ ನಾನು ಪರ ಊರಿಗೆ ವರ್ಗಾವಣೆಯಾಗಿದ್ದರೂ ಸ್ವಾಮೀಜಿಯವರು ಫೋನ್ ಮಾಡಿ ಕರೆಸಿಕೊಂಡು ಜನ್ಮದಿನದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲು ಸರ್ಕಾರಿ ಆಸ್ಪತ್ರೆ ಆಯ್ಕೆ ಮಾಡಿಕೊಂಡಿರುವುದಕ್ಕೆ ಧನ್ಯವಾದ ತಿಳಿಸಿದರು. ವೈದ್ಯಾಧಿಕಾರಿಯಾದ ಡಾ,ಚನ್ನಬಸಪ್ಪ ಮಾತನಾಡಿ ಸ್ವಾಮೀಜಿಗಳು ಪ್ರತಿವರ್ಷ ಆಸ್ಪತ್ರೆಗೆ ಬಂದು ತಮ್ಮ ಜನ್ಮದಿನದ ಪ್ರಯುಕ್ತ ಎಲ್ಲಾ ರೋಗಿಗಳಿಗೆ ಬೇಗ ಗುಣಮುಖರಾಗಲಿ ಎಂದು ಆಶೀರ್ವಾದ ಮಾಡಿ ಅವರಿಗೆ ಹಣ್ಣು ಹಂಪಲು ಸಿಹಿಯನ್ನು ವಿತರಿಸುತ್ತಿದ್ದಾರೆ ಆದ್ದರಿಂದ ಅವರಿಗೆ ನಾನು ನಮಸ್ಕಾರಗಳನ್ನು ತಿಳಿಸುತ್ತೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರಸೂತಿ ತಜ್ಞರಾದ ಡಾ, ಸಿಂಧುರವರು ಹಾಗೂ ರೋಗಿಗಳು ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Admin November 22, 2025 0
ಮಾದರಿ ನೆರೆಹೊರೆ ,ಮಾದರಿ ಸಮಾಜ ,ರಾಷ್ಟ್ರೀಯ ಅಭಿಯಾನ : ಸೈಯದ್ ಇಸ್ಮಾಯಿಲ್.

ಮಾದರಿ ನೆರೆಹೊರೆ, ಮಾದರಿ ಸಮಾಜ, ರಾಷ್ಟ್ರೀಯ ಅಭಿಯಾನ-- ಸಯಾದ್ ಇಸ್ಮಾಯಿಲ್.................... ತರೀಕೆರೆ, ನ, 21 -- ಮನುಷ್ಯರಾಗಿ ಜನಿಸಿದ ನಾವು ನೆರೆಹರೆಯವರೊಂದಿಗೆ ಪ್ರೀತಿ ವಿಶ್ವಾಸ ಸಹಕಾರ ಸೌಹಾರ್ದ ಮನೋಭಾವದಿಂದ ವರ್ತಿಸಿದರೆ ಸಮಾಜದಲ್ಲಿ ಸೌಹಾರ್ದ ಸಹಕಾರಗಳು ನೆಲೆಗೊಳ್ಳುತ್ತದೆ ಕೋಪ ದ್ವೇಷವನ್ನು ತೊರೆದು ಶಾಂತಿ ಸೌಹಾರ್ದತೆ ಸ್ಥಾಪಿಸಬೇಕು ಎಂದು ಜಮಾತೆ ಇಸ್ಲಾಮಿ ಹಿಂದು ಸಂಘಟನೆಯ ತರೀಕೆರೆ ತಾಲೂಕು ಅಧ್ಯಕ್ಷರಾದ ಸೈಯದ್ ಇಸ್ಮಾಯಿಲ್ ಹೇಳಿದರು. ಅವರು ಇಂದು ಪಟ್ಟಣದ ಜಮಾತಿ ಇಸ್ಲಾಮಿ ಹಿಂದ್ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು. ಮಾನವ ಹಕ್ಕುಗಳ ಬಗ್ಗೆ ಮತ್ತು ಟ್ರಾಫಿಕ್ ನಿಯಮಗಳ ಕುರಿತು ಜಾಗೃತಿ ಸಮಾವೇಶ ಮಾಡುವುದು ವಿದ್ಯಾರ್ಥಿಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುವುದು ಮತ್ತು ಮನುಷ್ಯರ ಸಂಬಂಧಗಳಲ್ಲಿ ಭಾಷೆ ಕುಲ ಗೋತ್ರ ಮತ್ತು ಧರ್ಮ ಎಲ್ಲವೂ ಪರಸ್ಪರ ಭಿನ್ನವಾಗಿದ್ದು ಆದರೆ ಮಾನವ ಧರ್ಮ ಒಂದೇ ಎಂಬ ಮಾದರಿ ನೆರೆ ಹೊರೆ, ಮಾದರಿ ಸಮಾಜ,ಎಂಬ ಶೀರ್ಷಿಕೆ ಅಡಿಯಲ್ಲಿ ನೆರೆ ಹೊರೆ ಯವರ ಹಕ್ಕುಗಳ ಕುರಿತು ರಾಷ್ಟ್ರೀಯ ಮಟ್ಟದ ಅಭಿಯಾನವನ್ನು ನವೆಂಬರ್ 21 -2025 ರಿಂದ ನವೆಂಬರ್ 30 ರವರೆಗೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಈ ಕಾರ್ಯಕ್ರಮಕ್ಕೆ ಸಾರ್ವಜನಿಕರೆಲ್ಲರೂ ಸಹಕರಿಸಿ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್ ನ ಮುಖಂಡರಾದ ಆದಿಲ್ ಪಾಷರವರು ಉಪಸ್ಥಿತರಿದ್ದರು.

Admin November 21, 2025 0
ಚಿರತೆ ದಾಳಿಗೆ ಮಗು ಬಲಿ.

ತರೀಕೆರೆ ತಾಲೂಕಿನ ಶಿವಪುರದ ತೋಟವೊಂದರಲ್ಲಿ ಕೂಲಿ ಕಾರ್ಮಿಕರ ವಸತಿಗೃಹದಲ್ಲಿ ಆಟ ಆಡುತ್ತಿದ್ದ ಐದು ವರ್ಷದ ಸಾನ್ವಿ ಎಂಬ ಮಗುವಿನ ಮೇಲೆ ಇಂದು ಸಂಜೆ ಚಿರತೆ ದಾಳಿ  ಮಾಡಿ ಮಗುವನ್ನು ಬಲಿ ಪಡೆದಿರುತ್ತದೆ .ಮಗುವಿನ ಪೋಷಕರು ಬಿಜಾಪುರ ಮೂಲದವರು ಎಂದು ತಿಳಿದು ಬಂದಿರುತ್ತದೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ   20 ಲಕ್ಷ ಪರಿಹಾರ ಘೋಷಿಸಿರುತ್ತಾರೆ.

Admin November 20, 2025 0
ಸಿಂಧನೂರು ಹತ್ತಿ ಖರೀದಿ ಕೇಂದ್ರದ ಲ್ಲಿರುವ ಅನ್ಯಭಾಷೆಯ ಸಿಬ್ಬಂದಿಗಳ ಹಾವಳಿಯನ್ನು ತಡೆಗಟ್ಟಲು ಸುರೇಶ ಗೊಬ್ಬರಕಲ್ ಒತ್ತಾಯ.

ವರದಿ .ಎಸ್ .ಎನ್ ವೀರೇಶ ಸಿಂಧನೂರು ನ 07 ಸಿಂಧನೂರು ತಾಲ್ಲೂಕಿನಲ್ಲಿ ರುವ ಹತ್ತಿ ಖರೀದಿ ಕೇಂದ್ರ ದಲ್ಲಿ ಕನ್ನಡ ಭಾಷೆಯನ್ನು ಮಾತನಾಡಲು ಬಾರದೇ ಇರುವ ಅನ್ಯ ಭಾಷಿಕರ ಸಿಬ್ಬಂದಿಗಳನ್ನು ನೇಮಕ ವಾಗಿದ್ದು,ಇದರಿಂದಾಗಿ ರೈತರಿಗೆ ಅವರು ಮಾತನಾ ಡುವ ಭಾಷೆ ಅರ್ಥವಾಗ ದೇ ತಿಳಿಯದೇಭಾಷಾ ಸಮಸ್ಯೆ ಉಂಟಾಗಿ ಸಿಬ್ಬಂ ದಿ ಮತ್ತು ರೈತರ ನಡುವೆ ದಿನನಿತ್ಯ ಜಗಳ ನಡೆಯುತ್ತಿ ವೆ,ಸಿಬ್ಬಂದಿಗಳು ಇಲ್ಲಿಗೆ ಬಂದು ಎರಡು ಮೂರು ವರ್ಷಗಳ ಕಾಲ ಅದರೂ ಕನ್ನಡ ಕಲಿಯದೇ ಕನ್ನಡ ನಾಡಿನಲ್ಲಿ ದರ್ಪ ದಿಂದ ರೈತರನ್ನು ತಮ್ಮ ಭಾಷೆಯ ಲ್ಲಿ ಮಾತನಾಡುವಂತೆ ಸಿಬ್ಬಂದಿಗಳು ಒತ್ತಾಯ ಮಾ ಡುವುದು ಎಷ್ಟರ ಮಟ್ಟಿಗೆ ನ್ಯಾಯ ಸಮ್ಮತ, ಕನ್ನಡದಲ್ಲಿ ಹೇಳಿ ಎಂದು ರೈತರು ಸಿಬ್ಬಂದಿ ಗಳನ್ನು ಒತ್ತಾಯಿಸಿದಾಗ ನಮ್ಮಿಂದ ಆಗುವುದಿಲ್ಲ,ನೀವು ಏನು ಬೇಕಾದರೂ ಮಾಡಿ ಕೊಳ್ಳಿ ನೀವು ಯಾರಿಗೆ ಬೇಕಾದ ರೂ ದೂರು ಕೊಡಿ ಎಂದು ರೈತರನ್ನು ಗದರಿಸಿ ಕಳುಹಿ ಸುತ್ತಾರೆ,ಇಂತಹ ಸೊಕ್ಕಿ ನಿಂದ ಮಾತನಾಡುವ ಸಿಬ್ಬಂದಿಗಳನ್ನು ಬದಲಾ ಯಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ(ಎಚ್.ಶಿವ ರಾಮೇಗೌಡ ಬಣ)ದ ತಾಲ್ಲೂಕು ಅಧ್ಯಕ್ಷ ಸುರೇಶ ಗೊಬ್ಬರಕಲ್ ನಗರದ ತಹಶಿಲ್ದಾರರ ಕಚೇರಿ ಮೂ ಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಅವರುಮಾತನಾಡಿದರು.   ಮುಂದುವರಿದು,ಇನ್ನೂ ಹತ್ತಿ ಖರೀದಿ ಮಾ ಡುವ ಮುನ್ನ ಒಂದು ದರ ನಿಗದಿ ಪಡಿಸಿ ಅದನ್ನು ಪರಿಶೀಲನೆ ಮಾಡಿ ಅನಂತರ ಮತ್ತೊಂ ದು ದರವನ್ನು,ಅದರೇ ಕಡಿ ಮೆ ದರಕ್ಕೆ ನಿಗದಿ ಮಾಡಿ ರೈತರಿಗೆ ಹತ್ತಿ ಖರೀದಿಯ ವ್ಯವಹಾರದಲ್ಲೂ ಸಹ ವಂ ಚಿಸುತ್ತಿದ್ದಾರೆ,ಬೇರೆ ಬೇರೆ ತಾಲ್ಲೂಕುಗಳಿಂದ ಹತ್ತಿ ಖರೀದಿ ಕೇಂದ್ರಕ್ಕೆ ತರುತ್ತಿ ದ್ದು, ಇದರಿಂದಾಗಿ ಖರೀದಿ ಕೇಂದ್ರದಲ್ಲಿ ವಾಹನಗಳ ದಟ್ಟನೆ ಹೆಚ್ಚಾಗಿ ಜನರಿಗೆ ಓಡಾಡಲು ತೊಂದರೆಯಾ ಗುವುದಲ್ಲದೇ, ಖರೀದಿ ಕೇಂದ್ರದಲ್ಲಿ ರೈತರಿಗೆ ಕುಡಿಯುವ ನೀರಿನ ವ್ಯವ ಸ್ಥೆ ಇಲ್ಲ,   ಅದ್ದರಿಂದ ಕರ್ನಾಟಕ ರಕ್ಷಣಾ ವೇದಿಕೆ(ಎಚ್.ಶಿವ ರಾಮೇಗೌಡ ಬಣ) ಒತ್ತಾಯ ಏನೆಂದರೆ, ಹತ್ತಿ ಖರೀದಿ ಕೇಂದ್ರದಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿಗ ಳನ್ನು ನೇಮಕ ಮಾಡ ಬೇಕು, ಅನ್ಯಭಾಷಿಕದವ ರನ್ನು ಕೂಡಲೇ ಬೇರೆಡೆಗೆ ಎತ್ತಂಗಡಿಮಾಡಬೇಕು,ಹತ್ತಿ ದರವನ್ನು ಒಂದು ಸಲ ಮಾತ್ರ ನಿಗದಿಪಡಿಸುವು ದು ಸೇರಿದಂತೆ ನಮ್ಮ ಎಲ್ಲ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸ ಬೇಕು,ಇಲ್ಲದಿದ್ದರೆ ರೈತರ ಸಹಯೋಗ ದೊಂದಿಗೆ ಖರೀದಿ ಕೇಂದ್ರದ ಮುಂದೆ ಧರಣಿ ಹಮ್ಮಿಕೊಳ್ಳಲಾಗು ವುದು ಎಂದು ತಾಲ್ಲೂಕು ಅಧ್ಯಕ್ಷ ಸುರೇಶ ಗೊಬ್ಬರಕ ಲ್ಎಚ್ಚರಿಕೆ ನೀಡಿದರು.   ಈ ಸಂದರ್ಭದಲ್ಲಿ ಉಪಾ ಧ್ಯಕ್ಷ ಹನುಮೇಶ ತಿಪ್ಪನ ಹಟ್ಟಿ,ನಗರ ಘಟಕ ಅಧ್ಯಕ್ಷ ದೌವಲ್ ಸಾಬ ದೊಡ್ಮನಿ, ಉಪಾಧ್ಯಕ್ಷ ರಾಘವೇಂದ್ರ, ವಿದ್ಯಾರ್ಥಿ ಘಟಕ ಅಧ್ಯಕ್ಷ ಆಂಜನೇಯ ದೇಸಾಯಿ, ತಾ.ಸಂಚಾಲಕ ಮೆಹೆ ಬೂ ಬ್ ಕೆಂಗಲ್,ಸೇರಿದಂತೆ ಖಾದರ್ ಖಾನ್,ಹನುಮೇ ಶ್ ಗೀತಾಕ್ಯಾಂಪ್‌,ಮೌಲಾ ಲಿ,ವಿಶ್ವನಾಥ್ ಭಾಗವಹಿ ಸಿದ್ದರು.

Admin November 7, 2025 0
ಭುವನೇಶ್ವರಿ ಭಾವಚಿತ್ರ ಇಲ್ಲದ ರಾಜ್ಯೋತ್ಸವ.

ತರೀಕೆರೆಯ ಬಯಲು ರಂಗ ಮಂದಿರದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಭುವನೇಶ್ವರಿ ತಾಯಿಯ ಫೋಟೋ ಇಡದೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಜನಪ್ರತಿನಿಧಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಸಹ ಯಾರು ಗಮನ ಹರಿಸದಿರುವುದು ವಿಪರ್ಯಾಸವೇ ಸರಿ. ಕಾರ್ಯಕ್ರಮ ಮುಗಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಕನ್ನಡಪರ ಸಂಘಟನೆಗಳ ಮುಖಂಡರು ಮುಂದಿನ ದಿನಗಳಲ್ಲಿ ಇಂತಹ ಬೇಜವಾಬ್ದಾರಿತನ ಮುಂದುವರಿದರೆ ಅದೇ ಕಾರ್ಯಕ್ರಮದಲ್ಲಿ ಘಟನೆಯನ್ನು ಖಂಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ತರೀಕೆರೆ ತಹಸಿಲ್ದಾರ್ ವಿಶ್ವಜಿತ್ ಮೆಹ್ತಾ ಅವರು ಈ ಕೂಡಲೇ ನಾಡಹಬ್ಬ ಆಚರಣೆ ಸಮಿತಿ ಅವರಿಗೆ ನೋಟಿಸ್ ನಲ್ಲಿ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

Admin November 1, 2025 0
ಕುಲುಮೆಯ ಕಮ್ಮಟನಿಗೆ ಒಲಿದ ರಾಜ್ಯ ಪ್ರಶಸ್ತಿ..

ಸಂಗ್ರಹ ::ಜೆ .ಲಿಂಗರಾಜ್ ಕರ್ನಾಟಕ ಸಾಹಿತ್ಯ , ಸಾಂಸ್ಕೃತಿಕ, ಕ್ಷೇತ್ರದ ಕಿರೀಟಕ್ಕೆ ಇಂದು ಹೊಸಗರಿ ಸೇರ್ಪಡೆಯಾಗಿದೆ ಅದು ರಹಮತ್ ತರೀಕೆರೆ ,ಅವರಿಗೆ ಸರ್ಕಾರ ನೀಡಿರುವ ರಾಜ್ಯ ಪ್ರಶಸ್ತಿ ಒಲಿದು ಬಂದಿದೆ. ತರೀಕೆರೆಯ ಸಾಮಾನ್ಯ ಜನರಿಗೆ ಕೆ.ಎಂ .ರೆಹಮತ್ ಉಲ್ಲಾ ಅಂದರೆ ಜನರಿಗೆ ಅಷ್ಟಾಗಿ ತಿಳಿದಿರುವುದಿಲ್ಲ ಆದರೆ "ರೆಹಮತ್ ತರೀಕೆರೆ" ಎಂದರೆ ಎಲ್ಲರಿಗೂ ತಿಳಿದಿರುವ ಚಿರಪರಿಚಿತ ಹೆಸರಾಗಿದೆ. 1959ರ ಆಗಸ್ಟ್ 26ರಂದು ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕಿನ ಸಮತಳ ಗ್ರಾಮದಲ್ಲಿ ಜನಿಸಿದ ರೆಹಮತ್ ರವರದು ಕಡು ಬಡತನದ ಕುಟುಂಬ ತಂದೆ ಕೃಷಿ ಮತ್ತು ಕುಲುಮೆ ವೃತ್ತಿ ಮಾಡುತ್ತಿದ್ದರೆ ತಾಯಿ ಗೃಹಣಿ. ಸಮತಳ ದಲ್ಲಿ ಜೀವನ ಮಾಡುವುದು ಕಷ್ಟವಾದಾಗ ಕುಟುಂಬ ವಲಸೆ ಬಂದಿದ್ದು ತರೀಕೆರೆ ಪಟ್ಟಣಕ್ಕೆ ತುಂಬು ಕುಟುಂಬದಲ್ಲಿ ಬೆಳೆದ ರೆಹಮತ್ ರವರು ವಿದ್ಯಾಭ್ಯಾಸದ ಜೊತೆಗೆ ಕೂಲಿ ಮಾಡುವುದು ನಿತ್ಯ ಕಾಯಕವಾಗಿತ್ತು. ಎಸ್. ಎಸ್. ಎಲ್. ಸಿ ನಂತರ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ಐಚ್ಚಿಕ ವಿಷಯದಲ್ಲಿ ಪದವಿ ಮುಗಿಸಿದರು, ಮುಂದೆ ಮೈಸೂರಿನ ಮಾನಸಗಂಗೋತ್ರಿ ಯಲ್ಲಿ ಏಳು ಸ್ವರ್ಣ ಪದಕಗಳ ಸಾಧನೆಯೊಂದಿಗೆ ಸ್ನಾತಕೋತ್ತರ ಪದವಿ ಪೂರೈಸಿದರು. 1988 ರಲ್ಲಿ ಪ್ರೊಫೆಸರ್ ಚೆನ್ನಯ್ಯ ನವರ ಮಾರ್ಗದರ್ಶನದಲ್ಲಿ ಪಿ.ಎಚ್. ಡಿ ಪದವಿ ಪೂರೈಸಿದರು. ನಂತರ ತಾವು ಓದಿದ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ರೆಹಮತ್ ರವರು ನಂತರ ಚಂದ್ರಶೇಖರ ಕಂಬಾರರ ಆಹ್ವಾನದ ಮೇರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಮತ್ತು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದರು.  ತರೀಕೆರೆಯ ಅಂದಿನ ಚಿರಪರಿಚಿತ" ಅಂಚೆ ವಾರ್ತೆ"ಪತ್ರಿಕೆಯಲ್ಲಿ ಅವರ ಕಥೆ, ಕವಿತೆಗಳು ನಿರಂತರವಾಗಿ ಪ್ರಕಟವಾಗುತ್ತಿದ್ದವು. ಮುಖ್ಯವಾಗಿ 1998 ರಲ್ಲಿ ಪ್ರಕಟವಾದ" ಕರ್ನಾಟಕ ಸೂಫಿಗಳು", ಅಂಡಮಾನ್ ಕನಸು, ಧರ್ಮ ಪರೀಕ್ಷೆ, ಅವರ ಪ್ರಮುಖ ಕೃತಿಗಳಾಗಿದ್ದವು. ಮುಂದೆ ಹತ್ತಾರು ಪುಸ್ತಕಗಳನ್ನು ಬರೆದ ರೆಹಮತ್ ರವರು ತರೀಕೆರೆ ತಾಲೂಕಿನ ಗ್ರಾಮ ಒಂದರ ಹೆಸರಿನಲ್ಲಿ ಗೇರಮರಡಿ ಕಥೆಗಳು ಎಂಬ ಜಾನಪದ ಸಂಪಾದನೆ ಪುಸ್ತಕವನ್ನು ರಚಿಸಿದರು ಇಂತಹ ಸಾಹಿತ್ಯ ಕ್ಷೇತ್ರದ ಕಮ್ಮಟನಿಗೆ 2014ರ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ಒಲಿದಿರುವುದು ಹೆಮ್ಮೆಯ ವಿಷಯ. ಜೊತೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಲಂಕೇಶ ಪ್ರಶಸ್ತಿ, ಅಂತಹ ಹತ್ತಾರು ಪ್ರಶಸ್ತಿಗಳು ಒಲಿದು ಬಂದಿದೆ ಇದರೊಂದಿಗೆ ಇಂದು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿರುವುದು ಚಿಕ್ಕಮಗಳೂರು ಜಿಲ್ಲೆಯ ಸಾಹಿತ್ಯ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ವಿಷಯವಾಗಿದೆ.

Admin October 30, 2025 0
ನವ ವಧು ಹೃದಯಘಾತದಿಂದ ಸಾವು.

ತರೀಕೆರೆ: ಪಟ್ಟಣದ ದಿಲೀಪ್ ಎಂಬ ಯುವಕನೊಂದಿಗೆ 31-10.2025 ರಂದು ಅನ್ನಪೂರ್ಣೇಶ್ವರಿ ಸಮುದಾಯ ಭವನದಲ್ಲಿ ಮದುವೆ ನಡೆಯ ಬೇಕಿದ್ದ ನವ ವದು ಶೃತಿ (30 )ಇಂದು ಅಜ್ಜಂಪುರ ತಾಲೂಕು ಸೊಲ್ಲಾಪುರ ಗ್ರಾಮದ ತಮ್ಮ ನಿವಾಸದಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾರೆ.

Admin October 30, 2025 0
ಮಕ್ಕಳು ಉಳಿತಾಯ ಮನೋಭಾವನೆ ಬೆಳೆಸಿಕೊಳ್ಳಬೇಕು ಟಿ.ಜಿ ಶಶಾಂಕ್

ತರೀಕೆರೆ :ಮಕ್ಕಳು ವಿದ್ಯಾರ್ಥಿ ಜೀವನದಿಂದಲೇ ಉಳಿತಾಯ ಮನೋಭಾವನೆ ಬೆಳೆಸಿಕೊಳ್ಳಬೇಕು ಅದಕ್ಕೆ ಪೂರಕವಾಗಿ ಉಳಿತಾಯ ಖಾತೆ ತೆಗೆಯಬೇಕು ಎಂದು ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ಚೇರ್ಮನ್ ಟಿ.ಜಿ ಶಶಾಂಕ್ ತಿಳಿಸಿದರು  ಶಾಲೆಯಲ್ಲಿ ಅಂಚೆ ಕಚೇರಿಯ ಇಂದ ನಡೆಸಿದ ಉಳಿತಾಯ ಖಾತೆಯ ಕಾರ್ಯಗಾರ ನಡೆಸಲಾಯಿತು. ಕಾರ್ಯಗಾರದಲ್ಲಿ ಅಂಚೆ ಕಚೇರಿ ಸಿಬ್ಬಂದಿಯಾದ ಶಿವಣ್ಣನವರು ಉಳಿತಾಯ ಖಾತೆ ಮಾಡಿಸುವ ವಿದ್ಯಾರ್ಥಿಗಳು ಪೂರಕ ದಾಖಲೆಗಳನ್ನು ತೊಂದರೆ ಶಾಲೆಯಲ್ಲಿಯೇ ಖಾತೆ ತೆರೆದು ಕೊಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಾಯಿ ಇಂಟರ್ ನ್ಯಾಷನಲ್ ಶಾಲೆ ಪ್ರಾಂಶುಪಾಲರಾದ ಡಾ. ಕಾರ್ತಿಕೇಯನ್, ಶಿಕ್ಷಕರಾದ ತೇಜಸ್ವಿ, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು

Admin October 18, 2025 0
ತರೀಕೆರೆ ನೂತನ ಗ್ರಂಥಾಲಯಕ್ಕೆ ಗುದ್ದಲಿ ಪೂಜೆ.

ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ ಅನುದಾನದಲ್ಲಿ ತರೀಕೆರೆ ಬಯಲು ರಂಗ ಮಂದಿರದ ಆವರಣದಲ್ಲಿ ನೂತನ ಗ್ರಂಥಾಲಯಕ್ಕೆ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಕೀರ್ತನ ರವರ ನೆರವೇರಿಸಿದರು. ಕಾರ್ಯಕ್ರಮದಲ್ಲಿ ತರೀಕೆರೆ ಶಾಸಕರಾದ ಜಿ.ಎಚ್. ಶ್ರೀನಿವಾಸ್ ,ಬಗರ ಹುಕುಂ ಸಮಿತಿ ಸದಸ್ಯರಾದ ಟಿ.ಎನ್ ಜಗದೀಶ್, ತರೀಕೆರೆ ಪುರಸಭೆ ಅಧ್ಯಕ್ಷರಾದ ವಸಂತ್ ಕುಮಾರ್ ,ತಾಲೂಕ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು

Admin October 17, 2025 0
ಅಂಚೆ ಕಚೇರಿಯಲ್ಲಿ ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ

ತರಿಕೆರೆ: ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ಮಕ್ಕಳು ಅಂಚೆ ಕಚೇರಿಯ ಬಗ್ಗೆ ತಿಳಿದುಕೊಳ್ಳಲು ತರೀಕೆರೆಯ ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿದರು. ಆರರಿಂದ, ಹತ್ತನೇ ತರಗತಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ತೆರಳಿ, ಅಂಚೆ ಕಚೇರಿಯ ಪತ್ರ ವ್ಯವಹಾರ, ಠೇವಣಿ, ಇನ್ಸೂರೆನ್ಸ್, ಮನಿ ಆರ್ಡರ್, ಉಳಿತಾಯ ಖಾತೆ, ಸುಕನ್ಯಾ ಸಮೃದ್ಧಿ ಯೋಜನೆ ಯ ,ಸಂಪೂರ್ಣ ಮಾಹಿತಿ ಪಡೆದುಕೊಂಡರು . ದೀಪಾವಳಿ ಹಬ್ಬದ ಶುಭಾಶಯ ಕೋರುವ ಆಕರ್ಷಕ ಗ್ರೀಟಿಂಗ್ ಕಾರ್ಡ್ ಗಳನ್ನು ಮಕ್ಕಳು ಸ್ವತಃ ತಯಾರಿಸಿ ಅವುಗಳನ್ನು ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕರ್ನಾಟಕ ರಾಜ್ಯಪಾಲರಿಗೆ ಶುಭಾಶಯ ಕೋರಿ ಅಂಚೆ ಮೂಲಕ ಕಳುಹಿಸಿಕೊಟ್ಟರು . ಶಾಲೆಯ ಪ್ರಾಂಶುಪಾಲರಾದ ಕಾರ್ತಿಕೇಯನ್, ಶಿಕ್ಷಕರಾದ ತೇಜಸ್ವಿ ಕುಮಾರ್, ಅನಿತಾ, ಸುಪ್ರಿಯ ಗೌಸ್ ಅಹಮದ್ ಗಿರೀಶ್ ಹಾಗೂ ಅಂಚೆ ಕಚೇರಿಯ ಪ್ರಭಾರ ಪೋಸ್ಟ್ ಮಾಸ್ಟರ್ ಅನಿತಾ ಹಾಗೂ ಕಚೇರಿ ಸಿಬ್ಬಂದಿಯಾದ ಶಿವಣ್ಣ ಮುಂತಾದವರು ಹಾಜರಿದ್ದರು

Admin October 17, 2025 0
ಬುಕ್ಕಾಂಬುಧಿಯಲ್ಲಿ RSS ನ ಪಥಸಂಚಲನ.

    ರಾಷ್ಟ್ರ ಮೊದಲು ಧ್ಯೇಯದೊಂದಿಗೆ ಸೇವೆ, ಸಮರ್ಪಣಾ ಭಾವದಿಂದ ಕೋಟ್ಯಂತರ ಭಾರತೀಯರ ವ್ಯಕ್ತಿತ್ವ ನಿರ್ಮಾಣಕ್ಕೆ ಕಳೆದ ಒಂದು ಶತಮಾನದಿಂದ ಶ್ರಮಿಸುತ್ತಿರುವ, ಮಾತೃಸ್ವರೂಪಿಯಾದ ಶ್ರೇಷ್ಠ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಅಂಗವಾಗಿ ಬುಕ್ಕಂಬುದ್ದಿ ಗ್ರಾಮದಲ್ಲಿ ಜರುಗಿದ ಪಥಸಂಚಲನದಲ್ಲಿ ಗಣವೇಷಧಾರಿಯಾಗಿ *ಮಾಜಿ ಶಾಸಕರು ಹಾಗೂ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನ ಅಧ್ಯಕ್ಷರಾದ ಡಿ.ಎಸ್ ಸುರೇಶ್ ರವರು* ಭಾಗವಹಿಸಿದ್ದರು.

Admin October 17, 2025 0
ಕುಡ್ಲೂರಿನಲ್ಲಿ ಮದ್ಯವ್ಯರ್ಜನ ಶಿಬಿರ

ತರೀಕೆರೆ : ಮದ್ಯವ್ಯರ್ಜನ ಶಿಬಿರ ಇದೊಂದು ಪವಿತ್ರ ಕಾರ್ಯಕ್ರಮ. ಇದು ಕೇವಲ ಧರ್ಮಸ್ಥಳದ ಕಾರ್ಯಕ್ರಮವಲ್ಲ. ಬದಲಾಗಿ ಇದೊಂದು ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮ. ಆದ್ದರಿಂದ ಸಾರ್ವಜನಿಕರ ತನು - ಮನ - ಧನ ಸಹಕಾರದೊಂದಿಗೆ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ (ರಿ.) ತರೀಕೆರೆ ಯೋಜನಾಧಿಕಾರಿ ಕೆ. ಕುಸುಮಾಧರ್ ಹೇಳಿದರು. ಅವರು ತಾಲ್ಲೂಕಿನ ಕುಡ್ಲೂರು ವಲಯದ ಕೊರಟಿಕೆರೆ ಶ್ರೀ ಬೊಮ್ಮಲಿಂಗೇಶ್ವರ ಸಮುದಾಯ ಭವನದಲ್ಲಿ ಪೊಲೀಸ್ ಇಲಾಖೆ ಅಜ್ಜಂಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ಕುಡ್ಲೂರು, ಶ್ರೀ ಬೊಮ್ಮಲಿಂಗೇಶ್ವರ ಸಮುದಾಯ ಭವನ, ಕೊರಟಿಕೆರೆ, ಗ್ರಾಮ ಪಂಚಾಯಿತಿ ಕೊರಟಿಕೆರೆ, ಲಯನ್ಸ್ ಕ್ಲಬ್ ಅಜ್ಜಂಪುರ, ಭೂಮಿಕ ಎಲೆಕ್ಟ್ರಿಕಲ್ಸ್ ಅಜ್ಜಂಪುರ, ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಸಮಿತಿ ಕೊರಟಿಕೆರೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ 1991ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರಂಭ, ವಿಸ್ತರಣೆಯ ಅನುಭವ ಹಾಗೂ ಅಸಾಮಾನ್ಯ ಸಾಧನೆಗಳ ಪರಿಚಯದೊಂದಿಗೆ ಸಮುದಾಯದ ಕಾರ್ಯಕ್ರಮಗಳಾದ ನಮ್ಮೂರು, ನಮ್ಮ ಕೆರೆ, ರುದ್ರಭೂಮಿ ಅನುದಾನ, ಶಿಥಿಲಗೊಂಡ ದೇವಸ್ಥಾನಗಳ ಜೀರ್ಣೋದ್ಧಾರ, ಶಾಲೆಗಳಿಗೆ ಪೀಠೋಪಕರಣ, ಜ್ಞಾನದೀಪ ಕಾರ್ಯಕ್ರಮದ ಮುಖೇನ ಗೌರವ ಶಿಕ್ಷಕರ ನಿಯೋಜನೆ, ಶಿಷ್ಯವೇತನ, ಮಾಸಾಶನ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ, ಹಾಗೂ ಧಾರ್ಮಿಕ ಕ್ಷೇತ್ರ ಹೀಗೆ ಹಲವು ವಿಭಾಗಗಳಲ್ಲಿ ಜನಮೆಚ್ಚುಗೆಯೊಂದಿಗೆ ಸಂಸ್ಥೆಯು ವಿಶ್ವ ಮಾನ್ಯತೆಯನ್ನು ಪಡೆದುಕೊಂಡಿದೆ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಅಜ್ಜಂಪುರ ತಾಲೂಕು ತಹಶೀಲ್ದಾರ್ ವಿನಾಯಕ್ ಸಾಗರ್ ನೆರವೇರಿಸಿ ಮಾತನಾಡಿದರು. ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಬೊಮ್ಮಲಿಂಗಪ್ಪ ಸಭಾಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು. ಅಖಿಲ ಕರ್ನಾಟಕ ಜನಜಾಗೃತಿ ಚಿತ್ರದುರ್ಗ ಯೋಜನಾಧಿಕಾರಿ ನಾಗರಾಜ್ ಕುಲಾಲ್ ಇವರು ಜನಜಾಗೃತಿ ವೇದಿಕೆ ಪ್ರಾರಂಭ, ಜನಜಾಗೃತಿ ವೇದಿಕೆ ಮೂಲಕ ಸಾಮಾಜಿಕ ಆಂದೋಲನ, ಮದ್ಯವರ್ಜನ ಶಿಬಿರ ಅನುಷ್ಠಾನ, ಮದ್ಯವರ್ಜನ ಶಿಬಿರದ ರೂಪುರೇಷೆ, ಮದ್ಯವರ್ಜನ ಶಿಬಿರದ ದೈನಂದಿನ ದಿನಚರಿ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವೇದಿಕೆಯ ಸದಸ್ಯರಾದ ಕೆ.ಬಿ. ಮಲ್ಲಪ್ಪ, ಅಸ್ಲಾಂ ಖಾನ್, ಟಿ.ಆರ್. ಶ್ರೀಧರ್, ಗ್ರಾಮದ ಮುಖಂಡ ಚಂದ್ರಶೇಖರ್, ಜಿ.ಪಂ. ಮಾಜಿ ಸದಸ್ಯೆ ರಾಧಾ, ಪಿಡಿಓ ಮಾಲತಿ, ಕುಡ್ಲೂರುಗ್ರಾ.ಪಂ. ಅಧ್ಯಕ್ಷೆ ತನುಜಾ, ಉಪಾಧ್ಯಕ್ಷೆ ಮಹೇಶ್ವರಮ್ಮ, ಉಪಸ್ಥಿತರಿದ್ದರು. ಶಿಬಿರವು ಎಂಟು ದಿನಗಳ ನಡೆಯಲಿದ್ದು ವಿವಿಧ ವೇದಿಕೆ ಮತ್ತು ಸಮಿತಿಗಳು ಮದ್ಯವರ್ಜನ ಶಿಬಿರವನ್ನು ನಿರ್ವಹಿಸಲಿದ್ದಾರೆ. ಯೋಜನೆಯ ಕುಡ್ಲೂರು ವಲಯ, ಸೇವಾಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರು, ನವಜೀವನ ಸಮಿತಿ ಸದಸ್ಯರಿದ್ದರು. ಕಾರ್ಯಕ್ರಮವನ್ನು ಸೇವಾಪ್ರತಿನಿಧಿ ಶಶಿಕಲಾ ಪ್ರಾರ್ಥಿಸಿ, ಮೇಲ್ವಿಚಾರಕ ಮಂಜುನಾಥ್ ನಿರೂಪಿಸಿ, ಕುಸುಮಾಧರ್ ಸ್ವಾಗತಿಸಿ, ಸೇವಾ ಪ್ರತಿನಿಧಿ ಸುರೇಖಾ ವಂದಿಸಿದರು.

Admin October 13, 2025 0
ಮುತ್ತುಗನ್ನೇ ರಸ್ತೆಗೆ ಶಾಸಕ H.K ಸುರೇಶ್ ರಿಂದ ಗುದ್ದಲಿ ಪೂಜೆ

ಬೇಲೂರು ತಾಲೂಕು ಮುತ್ತುಗನ್ನೆ ಗ್ರಾಮದಲ್ಲಿ ಬಹಳ ದಿನಗಳಿಂದ ದುರಸ್ತಿಯಲ್ಲಿದ್ದ ರಸ್ತೆಗೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು, ಬಹು ವರ್ಷಗಳ ಬೇಡಿಕೆಯಾಗಿದೆ ರಸ್ತೆಗೆ ಶಾಸಕರಾದ ಎಚ್ ಕೆ ಸುರೇಶ್ ಗುದ್ದಲಿ ಪೂಜೆ ನೆರವೇರಿಸಿದರು, ಈ ಸಂದರ್ಭದಲ್ಲಿ ಯುವ ಮುಖಂಡರಾದ ಯತೀಶ್ ಕೋಡನಹಳ್ಳಿ , ಪುನೀತ್ ಸೂರ್ಯ ಮತ್ತು ಲೋಕೋಪಯೋಗಿ ಅಧಿಕಾರಿಗಳು ಉಪಸ್ಥಿತರಿದ್ದರು ಗ್ರಾಮದ ಮುಖಂಡರುಗಳಾದ ಸೋಮಣ್ಣ, ದಿನೇಶ್, ವಿರೂಪಾಕ್ಷಪ್ಪ, ಮನು, ದಯಾನಂದ್, ಗಂಗಾಧರ್ ಮತ್ತು ಗ್ರಾಮದ ಪ್ರಮುಖರಿದ್ದರು

Admin October 11, 2025 0
ದೂಪದ ಖಾನ್ ಗ್ರಾಮದಲ್ಲಿ ನೂತನ ಅಂಚೆ ಕಛೇರಿಯ ಉದ್ಘಾಟನೆ

  ದೂಪದ ಖಾನ್ ಗ್ರಾಮದಲ್ಲಿ ನೂತನ ಅಂಚೆ ಕಛೇರಿಯ ಉದ್ಘಾಟನೆ ತರೀಕೆರೆ : ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ದೂಪದಖಾನ್ ಗ್ರಾಮದಲ್ಲಿ ನೂತನ ಅಂಚೆ ಕಚೇರಿ ಪ್ರಾರಂಭಿಸಲಾಯಿತು. ನಂದಿ ಬಟ್ಟಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎ. ಅಬುಬಕರ್ ಕುಟ್ಟಿ ಮಾತನಾಡುತ್ತಾ ಈ ವ್ಯಾಪ್ತಿಯಲ್ಲಿ ಗ್ರಾಮಗಳ ಗ್ರಾಮಸ್ಥರು ಮತ್ತು ಕಾಫಿ ತೋಟಗಳ ಕೂಲಿ ಕಾರ್ಮಿಕರು ಅಂಚೆ ಕಛೇರಿಯ ಸೌಲಭ್ಯಗಳನ್ನು ಪಡೆಯಲು ತಣಿಗೆಬೈಲು ಇಲ್ಲವೇ ಲಿಂಗದಹಳ್ಳಿಗೆ ಹೋಗಬೇಕಾಗಿತ್ತು. ಈ ಬಗ್ಗೆ ಚಿಕ್ಕಮಗಳೂರು ಅಂಚೆ ಅಧೀಕ್ಷಕರು ಮತ್ತು ಅಂಚೆ ನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದ ಕಾರಣ ಇದಕ್ಕೆ ಸ್ಪಂಧಿಸಿದ ಅಧಿಕಾರಿಗಳು ದೂಪದ ಖಾನ್ ಗ್ರಾಮದಲ್ಲಿ ನೂತನ ಅಂಚೆ ಕಛೇರಿ ಸ್ಥಾಪನೆಗೆ ಅವಕಾಶ ನೀಡಿದ್ದಾರೆ ಎಂದರು. ದೂಪದ ಖಾನ್ ಗ್ರಾಮದ ಬಹು ದಿನಗಳ ಬೇಡಿಕೆಯಾಗಿದ್ದ ಈ ಅಂಚೆ ಕಛೇರಿ ಸ್ಥಾಪನೆಯಿಂದ, ಬಡವರು, ಕೂಲಿ ಕಾರ್ಮಿಕರು, ವಿಶೇಷವಾಗಿ ಸಂಧ್ಯಾ ಸುರಕ್ಷಾ ಯೋಜನೆ ಮತ್ತು ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೂ, ವಿಶೇಷ ಚೇತನರುಗಳು, ಸೇರಿದಂತೆ ನೂರಾರು ಮಂದಿಗೆ ಅನುಕೂಲವಾಗಲಿದ್ದು ಪ್ರತಿಯೊಬ್ಬರು ಅಂಚೆ ಕಛೇರಿಯ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ಗ್ರಾಮದ ಹಿರಿಯರಾದ ಪುಂಗವನಮ್ ಮೇಸ್ತ್ರೀ ಮಾತನಾಡಿ ವಿವಿಧ ಮಾಶಾಸನಗಳನ್ನು ಪಡೆದುಕೊಳ್ಳುವ ಮತ್ತು ಅಂಚೆ ಕಛೇರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ವಯಸ್ಸಾದ ಹಿರಿಯ ನಾಗರೀಕರು ದೂರದ ತಣಿಗೆಬೈಲಿನ ಅಂಚೆ ಕಛೇರಿಗೆ ಬಾಡಿಗೆ ಆಟೋ, ಇನ್ನಿತರ ವಾಹನಗಳನ್ನು ಮಾಡಿಕೊಂಡು ಹೋಗಿ ಬರಬೇಕಾಗಿತ್ತು ಇದರಿಂದ ಗ್ರಾಮಸ್ಥರ ಶ್ರಮ ಸಮಯದ ಜೊತೆಗೆ ಹಣವು ಸಹ ಉಳಿತಾಯವಾಗಲಿದ್ದು, ಬಡವರ ಜೀವನಕ್ಕೆ ಅನುಕೂಲವಾಗಿದ್ದು, ದೂಪದ ಗ್ರಾಮಕ್ಕೆ ಅಂಚೆ ಕಛೇರಿ ಸೌಲಭ್ಯವನ್ನು ನೀಡಿದ ಅಂಚೆ ಇಲಾಖಾ ಅಧಿಕಾರಿಗಳಿಗೆ ಗ್ರಾಮಸ್ಥ ಪರವಾಗಿ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.  ದೂಪದಖಾನ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ನಾಗರಾಜಪ್ಪ, ಸಹ ಶಿಕ್ಷಕ ಅರುಣ್ ಕುಮಾರ್, ದೂಪದಖಾನ್ ಕಾಫಿ ತೋಟದ ವ್ಯವಸ್ಥಾಪಕ ರಮೇಶ್ ಗೌಡ, ಗ್ರಾ.ಪಂ. ಮಾಜಿ ಸದಸ್ಯ ಜೆ. ಕೃಷ್ಣನಾಯ್ಕ, ಗ್ರಾಮಸ್ಥರಾದ ಸೈಯದ್, ಸರೋಜಮ್ಮ, ಹೊನ್ನಮ್ಮ, ಜಯಬಾಯಿ, ಮಂಜಣ್ಣ ಮುಂತಾದವರು ಹಾಜರಿದ್ದರು.   

Admin October 9, 2025 0
ಸಂಘಶತಾಬ್ದಿ ಕಾರ್ಯಕ್ರಮದಲ್ಲಿ ಡಿ. ಎಸ್. ಸುರೇಶ್

ತರೀಕೆರೆ ನಗರದ ಅನ್ನಪೂರ್ಣೇಶ್ವರಿ ಸಭಾಭವನದಲ್ಲಿ ನಡೆದ  ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಾಬ್ದಿಯ ಅಂಗವಾಗಿ ನಡೆದ ವಿಜಯದಶಮಿ ಉತ್ಸವದಲ್ಲಿ, *ಮಾಜಿ ಶಾಸಕರು ಹಾಗೂ  ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನ ಅಧ್ಯಕ್ಷರಾದ ಡಿ.ಎಸ್ ಸುರೇಶ್ ರವರು* ಭಾಗವಹಿಸಿದ್ದರು.  

Admin October 7, 2025 0
ಮೈ ದುಂಬಿಹರಿಯುತಿರುವ ಜಂಬದಹಳ್ಳ ಜಲಾಶಯಕ್ಕೆ ಬಾಗಿನ ಸಮರ್ಪಣೆ

ಮೈ ದುಂಬಿಹರಿಯುತಿರುವ ಜಂಬದಹಳ್ಳ ಜಲಾಶಯಕ್ಕೆ ಶಾಸಕರಾದ G.H ಶ್ರೀನಿವಾಸ ರವರಿಂದ ಬಾಗಿನ ಸಮರ್ಪಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಮುಖಂಡರಾದ ಟಿ. ಎನ್. ಜಗದೀಶ್, ದರ್ಶನ್ duglapura, ರವಿ ಶಾಂತಿಪುರ, ಮತ್ತು ಸಿದ್ದರಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

Admin October 7, 2025 0
ಲಕ್ಕವಳ್ಳಿಯಲ್ಲಿ ನೂತನ ಆಸ್ಪತ್ರೆ ಉದ್ಘಾಟನೆ.

 1 ತರೀಕೆರೆ : ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಏಜೆನ್ಸಿಗಳು ಸರಿಯಾದ ಸಮಯಕ್ಕೆ ಮತ್ತು ನೀಡುವ ವೇತನದಲ್ಲೂ ವ್ಯತ್ಯಾಸ ಮಾಡುತ್ತಿರುವುದು ಸರ್ಕಾರ ಗಮನಕ್ಕೆ ಬಂದಿದ್ದು, ಈ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಹಕಾರವನ್ನು ಸ್ಥಾಫಿಸಿ ಆ ಸಹಕಾರ ಸಂಘದ ಮೂಲಕ ನೌಕರರಿಗೆ ವೇತನವನ್ನು ಪಾವತಿಸಲು ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‍ ಗುಂಡುರಾವ್ ಹೇಳಿದರು.  ಅವರು ತಾಲ್ಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ರೂ. 9 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.  ಇದುವರೆಗೂ ಖಾಸಗಿ ಏಜೆನ್ಸಿಯವರು ನಿರ್ವಹಿಸುತ್ತಿದ್ದ 108 ಅಂಬುಲೆನ್ಸ್‍ಗಳನ್ನು ಸಹ ಸರಿಯಾಗಿ ನಿರ್ವಹಿಸಿದ ಕಾರಣ, ಇನ್ನು ಮುಂದೆ ಸರ್ಕಾರವೇ ಇವುಗಳನ್ನು ನಿರ್ವಹಣೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯ ವೈದ್ಯಕೀಯ ಸೇವೆ ಸಲ್ಲಿಸಲು ಕೆಲವು ಅಡಚಣೆಗಳಿದ್ದವು. ಈಗ ಸರ್ಕಾರದಲ್ಲಿ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗಿದೆ. ಇದರ ನಂತರ 1850 ಎಂ.ಬಿ.ಬಿ.ಎಸ್. ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.  ಆರೋಗ್ಯ ಮತ್ತು ಶಿಕ್ಷಣ ಸರಿ ಇದ್ದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಕುಟುಂಬದಲ್ಲಿ ಆರೋಗ್ಯ ಸರಿ ಇಲ್ಲದಿದ್ದರೆ ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ. ಆದ್ದರಿಂದ ಪ್ರತಿಯೊಂದು ಆರೋಗ್ಯ ಕೇಂದ್ರದಲ್ಲೂ ದಿನದ 24 ಗಂಟೆಯೂ ವೈದ್ಯರು, ನರ್ಸ್ ಮತ್ತು ಸಿಬ್ಬಂದಿಗಳು ರೋಗಿಗಳು ಯಾವಾಗ ಬಂದರೂ ಲಭ್ಯವಾಗಬೇಕು. ಈ ಬಗ್ಗೆ ಜಿ್ಲ್ಲಾ ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳು ನಿಗಾವಹಿಸಬೇಕು ಎಂದರು.  ರಾಜ್ಯ ಎಲ್ಲಾ ಎಲ್ಲಾ ಆಸ್ಪತ್ರೆಗಳ ನಿರ್ವಹಣೆ, ಔಷಧಿಗಳ ದಾಸ್ತಾನು, ಗುಣಮಟ್ಟ, ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಪ್ರತಿನಿತ್ಯ ಪರಿಶೀಲಿಸಲಾಗುತ್ತಿದೆ. ಹೆರಿಗೆ ಆಸ್ಪತ್ರೆಗಳಲ್ಲಿ ಪ್ರತಿ ತಿಂಗಳು 300 ರಿಂದ 400 ಹೆರಿಗೆಗಳು ಆಗುವಂತೆ ನೋಡಿಕೊಳ್ಳಬೇಕು. ಇದರಿಂದ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದನ್ನು ತಡೆಗಟ್ಟಿದಂತಾಗುತ್ತದೆ. ಆಗ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂದರು. ಇಲಾಖೆ ಒಂದು ಕಡೆ ಚಿಕಿತ್ಸೆ. ಮತ್ತೊಂದು ಕಡೆ ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ವಹಿಸುತ್ತಿದೆ. ಜನರು ರೋಗ ಬಾರದಂತೆ ಎಚ್ಚರಿಕೆ ವಹಿಸಬೇಕು. ಬಿ.ಪಿ., ಶುಗರ್, ಕ್ಯಾನ್ಸರ್ ಮತ್ತೀತರೆ ರೋಗ ಲಕ್ಷಣಗಳು ಕಂಡು ಬಂದ ಲಕ್ಷಣ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ರೋಗ ಉಲ್ಬಣಗೊಂಡಾಗ ಪ್ರಯೋಜನವಾಗುವುದಿಲ್ಲ ಎಂದರು.  ಇಂಧನ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ ರಾಜ್ಯದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಶಕ್ತಿ ತುಂಬುವ ಯೋಜನೆಗಳಾಗಿವೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಕೋವಿಡ್‍ ಸಂದರ್ಭದಲ್ಲಿ ಮಹಿಳೆಯರು ಕುಟುಂಬ ನಿರ್ವಹಿಸುವಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಿದ್ದನ್ನು ಪಾದಯಾತ್ರೆ ಸಂದರ್ಭದಲ್ಲಿ ನಮ್ಮ ನಾಯಕ ರಾವುಲ್‍ ಗಾಂಧಿ ಮನಗಂಡು ಆರ್ಥಿಕ ಮಟ್ಟ ಸುಧಾರಿಸಲು ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಬಗ್ಗೆ ಸೂಚನೆ ನೀಡಿದ್ದರು ಎಂದರು.  ನಮ್ಮ ಪಕ್ಷ ಯಾರು ಆರ್ಥಿವಾಗಿ ಹಿಂದುಳಿದಿದ್ದಾರೆ. ಅವರ ಪರವಾಗಿ ಮಾಡುತ್ತಿದ್ದೇವೆ. ನಮ್ಮ ಪಕ್ಷದಲ್ಲಿ ಜಾತಿ ಇಲ್ಲ. ಪ್ರತಿಯೊಬ್ಬರು ಸಮಾಜದಲ್ಲಿ ಮೇಲ್ತಸ್ಥರಕ್ಕೆ ತರುವುದೇ ನಮ್ಮ ಪಕ್ಷದ ಉದ್ದೇಶವಾಗಿದೆ ಎಂದರು.  ಸದ್ಯ ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. 2013ರಲ್ಲಿ ಸೌರಶಕ್ತಿ ವಿದ್ಯುತ್ ಪ್ಲಾಟ್ ಸ್ಥಾಪಿಸಿ ಅತ್ಯಧಿಕ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಅದಲ್ಲದೆ ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ  ನೀರಿನ ಮರು ಬಳಕೆ ಮಾಡುವುದರ ಮೂಲಕ ಈಗ 1000 ಮೆಗ್ಯಾವ್ಯಾಟ್ ವಿದ್ಯುತ್ ಉತ್ಪಾದನೆ ಯಾಗುತ್ತಿದೆ. ಇಲ್ಲಿ ಇನ್ನೂ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ಒಟ್ಟು 3000 ಮೆಗಾವ್ಯಾಟ್‍ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದರು. ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ ಗ್ಯಾರಂಟಿ ಯೋಜನೆಗಳಿಂದ ದೇಶದಲ್ಲಿಯೇ ನಮ್ಮ ರಾಜ್ಯದ ಮಹಿಳೆಯರ ತಲಾ ಆದಾಯ ಹೆಚ್ಚಾಗಿದೆ ಎಂದು ವರದಿಯಾಗಿದೆ. ಅದೇ ರೀತಿ ಅಭಿವೃದ್ಧಿ ಕೆಲಸಗಳು ಸಹ ಭರದಿಂದ ನಡೆಯುತ್ತಿವೆ ಎಂದರು. ಲಕ್ಕವಳ್ಳಿಯಲ್ಲಿ ಉದ್ಘಾಟನೆಯಾದ ಸಮುದಾಯ ಆರೋಗ್ಯ ಕೇಂದ್ರ, ತರೀಕೆರೆ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಗೆ ಮತ್ತು ಕ್ಷೇತ್ರದ ಕೆಲವು ಗ್ರಾಮಗಳಲ್ಲಿರುವ ಆರೋಗ್ಯ ಕೇಂದ್ರಗಳಿಗೆ ವಿಶೇಷ ತಂತ್ರಜ್ಞಾನದ ಉಪಕರಣಗಳು ಮತ್ತು ಸಿಬ್ಬಂದಿಗಳ ಕೊರತೆಗಳ ಬಗ್ಗೆ ಸಚಿವರ ಗಮನ ಸೆಳೆದರು.  ಈ ಸಮಾರಂಭದಲ್ಲಿ ಚಿತ್ರದುರ್ಗ ಲೋಕಸಬಾ ಕ್ಷೇತ್ರದ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಉಪಾಧ್ಯಕ್ಷೆ ಭವಾನಿ ಜಿ. ಮತ್ತು ಸದಸ್ಯರು, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಸಿಇಓ ಎಚ್.ಎಸ್. ಕೀರ್ತನಾ, ಚಿಕ್ಕಮಗಳೂರು ಪೋಲೀಸ್ ಅಧಿಕ್ಷಕ ಡಾ. ವಿಕ್ರಮ್‍ ಅಮಟೆ, ಆರೋಗ್ಯ ಇಲಾಕೆ ಜಂಟಿ ನಿರ್ದೇಶಕಿ ಡಾ. ಮಲ್ಲಿಕಾ ಬಿ. ಇದ್ದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಸ್ವಾಗತಿಸಿದರು. ಪ್ರಾರ್ಥನೆ ವೀಣಾ, ಜ್ಯೋತಿ ಮತ್ತು ಅನುಷಾ ನಿರೂಪಿಸಿದರು.     

Admin October 7, 2025 0
ತರೀಕೆರೆ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ 30 ಬೆಡ್ ಗಳ ಕೊಠಡಿ ಉದ್ಘಾಟನೆ

ತರೀಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ 30 ಬೆಡ್ ಗಳ ವಾರ್ಡ್ ಅನ್ನು ಆಸ್ಪತ್ರೆಯ ಮೇಲ್ಭಾಗದಲ್ಲಿ ನಿರ್ಮಿಸಲಾಗಿದ್ದು ಅದನ್ನು ಸನ್ಮಾನ್ಯ ಜನಪ್ರಿಯ ಶಾಸಕರಾದ ಜಿ ಹೆಚ್ ಶ್ರೀನಿವಾಸರವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಡಾಕ್ಟರ್ ಶರತ್, ದರ್ಶನ್ ದುಗ್ಲಾಪುರ, ವೆಂಕಟೇಶ್ ಭಾವಿಕೆರೆ, ಮಂಜು ನಾಯ್ಕ, ಮಹಮ್ಮದ್ ಇರ್ಷಾದ್, ಕೃಷ್ಣಮೂರ್ತಿ, ವನಜಾಕ್ಷಿ, ಅವರು ಹಾಗೂ ಆರೋಗ್ಯ ಅಧಿಕಾರಿಗಳಾದ ಚನ್ನಬಸಪ್ಪನವರು ಮತ್ತು ಆಸ್ಪತ್ರೆಯ ಎಲ್ಲಾ ವೈದ್ಯರು ಸಿಬ್ಬಂದಿ ವರ್ಗದವರು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು

Admin October 6, 2025 0
ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿ ಮಹೋತ್ಸವ

ತರೀಕೆರೆ : ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ವಿವಿಧ ಅಲಂಕಾರಗಳಿಂದ ಶೋಭಿಸುತ್ತಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಿಯು ಹತ್ತುನೇ ದಿನದಂದು ಅಡಿಕೆ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದಳೆಂದು ಶರನ್ನವರಾತ್ರಿ ಮಹೋತ್ಸವದ ಅಧ್ಯಕ್ಷ ಟಿ. ಕೆ. ರಾಜಣ್ಣ ಹೇಳಿದರು. ಪಟ್ಟಣದ ತುದಿಪೇಟೆ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ದೇವಿಗೆ ನವರಾತ್ರಿ ಅಂಗವಾಗಿ ಬುಧುವಾರ 10ನೇ ದಿನ ಅಡಿಕೆ ಅಲಂಕಾರದೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ವಿಜೃಂಭಣೆಯಿಂದ ನಡೆಸಲಾಯಿತು. ವಿವಿಧ ಪೂಜೆಗಳೊಂದಿಗೆ ಪಟ್ಟಣದ ಶ್ರೀ ಸಪ್ತಗಿರಿ, ಶ್ರೀ ಶೇಷಗಿರಿ ಭಜನಾ ಮಂಡಳಿಯ ಅಧ್ಯಕ್ಷೆ ಲೀಲಾ ಸೋಮಶೇಖರಯ್ಯ, ಶರವನ್ನರಾತ್ರಿ ಮಹೋತ್ಸವದ ಅಧ್ಯಕ್ಷರು, ಸದಸ್ಯರು, ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಶ್ರೀ ಪಟ್ಟಾಭಿರಾಮ ಸೇವಾ ಸಮಿತಿಯ ಸದಸ್ಯರು ಮತ್ತು ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ಪೂಜೆಗಳನ್ನು ಸಾಂಗವಾಗಿ ನೆರವೇರಿಸಲಾಯಿತು. ವಿಶೇಷ ಅಲಂಕಾರದಲ್ಲಿ ಕಂಗೊಳಿಸುವ ದೇವಿಗೆ ಶ್ರೀ ಲಕ್ಷ್ಮೀ ಅಷ್ಟೋತ್ತರ, ಶ್ರೀ ಲಕ್ಷ್ಮೀ ದೇವಿ ಕುರಿತು ಹಾಡುಗಳನ್ನು ಹಾಡಿ ಸಂಪನ್ನಗೊಳಿಸಲಾಯಿತು. ದೇವಸ್ಥಾನದ ಅರ್ಚಕ ಮಂಜುನಾಥ ಹಾಗೂ ತಂಡದ ಅಖಿಲ್, ನಿಖಿಲ್, ಜೀವನ್, ಗುಂಡಣ್ಣ, ಅಡಿಕೆ ಅಲಂಕಾರವನ್ನು ನೆರವೇರಿಸಿದರು, ದೇವಿಯ ಅಲಂಕಾರ ನಯನ ಮನೋಹರವಾಗಿತೆಂದು ತಿಳಿಸಿದರು. ಮಹಾಮಂಗಳಾರತಿ, ತೀರ್ಥ, ಪ್ರಸಾದವನ್ನು ವಿನಿಯೋಗ ಮಾಡಲಾಯಿತು. ದೇವಾಲಯದ ರಾಜಣ್ಣ, ರಾಮಣ್ಣ ಮತ್ತು ರಾಜೇಶ್ ಹಾಗೂ ದೇವಸ್ಥಾನದ ಎಲ್ಲಾ ಸದಸ್ಯರು, ಭಜನಾ ಮಂಡಳಿಯ ಸದಸ್ಯನಿಯರು, ಭಕ್ತರು, ಸಾರ್ವಜನಿಕರು

Admin October 3, 2025 0
Popular post
ರಾಜಕೀಯವಾಗಿ ಕಾಂಗ್ರೆಸನಿಂದ ಶಾಪಗ್ರಸ್ತ ಜಿಲ್ಲೆಯಾದ ಚಿಕ್ಕಮಗಳೂರು ..!!??

ವರದಿ : J .ಲಿಂಗರಾಜು. ರಾಜಕೀಯವಾಗಿ ಕಾಂಗ್ರೆಸ್ ನಿಂದ ಇಂದಿರಾ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಿದ ಜಿಲ್ಲೆ ನಮ್ಮ ಚಿಕ್ಕಮಗಳೂರಿಗೆ ಸಲ್ಲುತ್ತದೆ ,ಆದರೆ ಅದೇ ಪಕ್ಷವು ಇಂದು  ಚಿಕ್ಕಮಗಳೂರು ಜಿಲ್ಲೆ ಕಾಂಗ್ರೆಸ್ ಶಾಸಕರನ್ನುಅಸಡ್ಡೆಯಿಂದ ನೋಡುತ್ತಿದೆ. ಜಿಲ್ಲೆಗೆ ಕಾಂಗ್ರೆಸ್ ಪಕ್ಷವು ಮಂತ್ರಿ ಭಾಗ್ಯ ಕೊಟ್ಟು ಎರಡು ದಶಕಗಳೇ ಕಳೆಯುತ್ತಿದೆ, ಸಗೀರ್ ಅಹಮದ್,  ಮೋಟಮ್ಮ ನಂತರ ಜಿಲ್ಲೆಗೆ ಕಾಂಗ್ರೆಸ್ ಮಂತ್ರಿ ಭಾಗ್ಯವನ್ನು ಕರುಣಿಸಿಲ್ಲ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆ ಹಿಂದುತ್ವ ಮತ್ತು ದತ್ತ ಪೀಠದ ವಿಷಯದಲ್ಲಿ ರಾಜಕೀಯ ವಾಗಿ ಬದಲಾಗಿ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಿತ್ತು .2013ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ತರೀಕೆರೆ ಕ್ಷೇತ್ರ ಮಾತ್ರ ಕಾಂಗ್ರೆಸ್ ಗೆ ಒಲಿದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು, ಜಿಲ್ಲೆಯಲ್ಲಿದ್ದ ಏಕೈಕ ಕಾಂಗ್ರೆಸ್ ಶಾಸಕ ಜಿ, ಹೆಚ್, ಶ್ರೀನಿವಾಸ್ ರವರಿಗೂ ಕೂಡ ಯಾವುದೇ ಹುದ್ದೆ ನೀಡಿರಲಿಲ್ಲ ಇನ್ನು ಬದಲಾದ ರಾಜಕೀಯ ಸನ್ನಿವೇಶದಲ್ಲಿ 2023ರ ಚುನಾವಣೆಯಲ್ಲಿ ಜಿಲ್ಲೆಯ ಜನತೆ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಆಶೀರ್ವಾದ ಮಾಡಿದ್ದರು. ಅದರಲ್ಲಿ ಶೃಂಗೇರಿ ಶಾಸಕರಾದ ಟಿ,ಡಿ, ರಾಜೇಗೌಡರಿಗೆ  KREDL ಸಂಸ್ಥೆಯ ಚೇರ್ಮನ್ ಮಾಡಿದ್ದು ಬಿಟ್ಟರೆ ಕಾಂಗ್ರೆಸ್ ಜಿಲ್ಲೆಗೆ ಯಾವುದೇ ರಾಜಕೀಯ ಸ್ಥಾನಮಾನ ಮಾಡಿರುವುದಿಲ್ಲ. ಇನ್ನು ಜಿಲ್ಲೆಯ ರಾಜ್ಯ ಮುಖಂಡ ರಾದ ಬಿ,ಎಲ್ ಶಂಕರ್ ರವರಿಗೆ ಚಿತ್ರಕಲಾ ಪರಿಷತ್ ಅಧ್ಯಕ್ಷ ಸ್ಥಾನ  ಕೊಟ್ಟಿದ್ದು ಬಿಟ್ಟರೆ  ಕಾರ್ಯಕರ್ತರಿಗೆ ಕೆಲಸಕ್ಕೆ ಬಾರದ ಹುದ್ದೆ ಕರುಣಿಸಿರುತ್ತದೆ .ಪ್ರಸಕ್ತವಾಗಿ ಜಿಲ್ಲೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರಿದ್ದು ಅದರಲ್ಲಿ ಮೂರು ಜನ ನೂತನ ಶಾಸಕರು ಇರುತ್ತಾರೆ. ಕಾಂಗ್ರೆಸ್ನಂತ ಪಕ್ಷದಲ್ಲಿ ನೂತನ ಶಾಸಕರಿಗೆ ಸಚಿವ ಸ್ಥಾನವಿರಲಿ ನಿಗಮ ಮಂಡಳಿಗೂ ಕೂಡ ಹತ್ತಿರ ಬಿಟ್ಟುಕೊಳ್ಳುವುದಿಲ್ಲ ಇನ್ನು ಉಳಿದ ಶಾಸಕರೆಂದರೆ ತರೀಕೆರೆ ಕ್ಷೇತ್ರದ ಜಿ. ಹೆಚ್ ಶ್ರೀನಿವಾಸ .ಎರಡನೇ ಬಾರಿ ಶಾಸಕರಾಗಿರುವ ಶ್ರೀನಿವಾಸ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಆಪ್ತ ವಲಯದಲ್ಲಿ ಗುರುತಿಸಿ ಕೊಂಡಿರುತ್ತಾರೆ. ತಮ್ಮ ಆಪ್ತ ವಲಯದ ದಲ್ಲಿರುವ ಶ್ರೀನಿವಾಸ್ ರವರಿಗೆ ಸಿದ್ದರಾಮಯ್ಯನವರು ಈ ಬಾರಿ ಸಂಪುಟ ಪುನಾರಚನೆ ಸಮಯದಲ್ಲಿ ಆಶೀರ್ವಾದ ಮಾಡುತ್ತಾರಾ ಕಾದು ನೋಡಬೇಕು.,?? ಶ್ರೀನಿವಾಸ್ ರವರಿಗೆ ಜಿಲ್ಲಾ ಕೋಟ ನಿಂದ ಸಚಿವ ಸ್ಥಾನ ಸಿಗದಿದ್ದರೆ ಜಾತಿ ಕೋಟದಿಂದ ಸಚಿವ ಸ್ಥಾನ ಖಂಡಿತ ಸಿಗಲಾರದು ಕುರುಬ ಸಮುದಾಯದ ಕೋಟದಿಂದ ಕೊಪ್ಪಳದ ರಾಘವೇಂದ್ರ ಹಿಟ್ನಾಳ್ ಮತ್ತು ಹೊಸದುರ್ಗದ ಬಿ.ಜಿ ಗೋವಿಂದಪ್ಪ ಪ್ರಮುಖ ಸ್ಥಾನದಲ್ಲಿದ್ದಾರೆ ಆದ್ದರಿಂದ ಸಿದ್ದರಾಮಯ್ಯನವರು ಜಿಲ್ಲೆಗೆ ಮುಂದಿನ ಅವಧಿಗಾದರೂ ಜಿಲ್ಲೆಯ ಒಬ್ಬ ಶಾಸಕರನ್ನು ಮಂತ್ರಿ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸುತ್ತಾರೆಂದು ಜಿಲ್ಲೆಯ ಜನತೆ ಕಾದು ಕುಳಿತಿದೆ.

ತರೀಕೆರೆ ಪೊಲೀಸರ ಕಾರ್ಯಾಚರಣೆ ಇಬ್ಬರು ಮನೆಗಳ್ಳರ ಬಂಧನ.

ಮನೆ ಕಳ್ಳತನ ನಡೆದ ಎರಡೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ತರೀಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.  ದಿನಾಂಕ 19/ 11/ 2025ರಂದು ತರೀಕೆರೆ ತಾಲೂಕಿನ ಎರೆಹಳ್ಳಿ ಗ್ರಾಮದ ಆಶಾ ಎಂಬುವವರ ಮನೆಯ ಮೇಲ್ಚಾವಣಿ ಮುರಿದು 96 ಗ್ರಾಂ ಚಿನ್ನ ಮತ್ತು 8000 ನಗದು ಕಳ್ಳತನವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅದೇ ಗ್ರಾಮದ ರಾಮಕೃಷ್ಣ ಮತ್ತು ಮೇಘರಾಜ್ ಎಂಬ ಕಳ್ಳರನ್ನು ಪತ್ತೆ ಮಾಡಿ ಅವರಿಂದ ಒಂಬತ್ತು ಲಕ್ಷದ 63 ಸಾವಿರ ಮೌಲ್ಯದ ಚಿನ್ನಾಭರಣ ಮತ್ತು 4, 400 ಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಈ ಕಾರ್ಯಚರಣೆಯಲ್ಲಿ ತರೀಕೆರೆ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್, ಪಿಎಸ್ಐ ಗಳಾದ ಮಂಜುನಾಥ್ ಮನ್ನಂಗಿ, ದೇವೇಂದ್ರ ರಾಥೋಡ್, ಹಾಗೂ ಸಿಬ್ಬಂದಿಗಳಾದ ರಾಮಪ್ಪ, ರುದ್ರೇಶ್, ರಿಯಾಜ್, ಧನಂಜಯ ಸ್ವಾಮಿ, ಶ್ರೀನಿವಾಸ್, ರವರು ಭಾಗವಹಿಸಿದ್ದರು. ಈ ಕಾರ್ಯಚರಣೆಯನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಅಧಿಕ್ಷಕರಾದ ವಿಕ್ರಮ ಅಮಟೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಟಿ ಜಯಕುಮಾರ್ ಮತ್ತು ತರೀಕೆರೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷರಾದ ಪರಶುರಾಮಪ್ಪ ನವರು ಶ್ಲಾಘಿಸಿದ್ದಾರೆ.

ಅಂಚೆ ಕಚೇರಿಯಲ್ಲಿ ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ

ತರಿಕೆರೆ: ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ಮಕ್ಕಳು ಅಂಚೆ ಕಚೇರಿಯ ಬಗ್ಗೆ ತಿಳಿದುಕೊಳ್ಳಲು ತರೀಕೆರೆಯ ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿದರು. ಆರರಿಂದ, ಹತ್ತನೇ ತರಗತಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ತೆರಳಿ, ಅಂಚೆ ಕಚೇರಿಯ ಪತ್ರ ವ್ಯವಹಾರ, ಠೇವಣಿ, ಇನ್ಸೂರೆನ್ಸ್, ಮನಿ ಆರ್ಡರ್, ಉಳಿತಾಯ ಖಾತೆ, ಸುಕನ್ಯಾ ಸಮೃದ್ಧಿ ಯೋಜನೆ ಯ ,ಸಂಪೂರ್ಣ ಮಾಹಿತಿ ಪಡೆದುಕೊಂಡರು . ದೀಪಾವಳಿ ಹಬ್ಬದ ಶುಭಾಶಯ ಕೋರುವ ಆಕರ್ಷಕ ಗ್ರೀಟಿಂಗ್ ಕಾರ್ಡ್ ಗಳನ್ನು ಮಕ್ಕಳು ಸ್ವತಃ ತಯಾರಿಸಿ ಅವುಗಳನ್ನು ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕರ್ನಾಟಕ ರಾಜ್ಯಪಾಲರಿಗೆ ಶುಭಾಶಯ ಕೋರಿ ಅಂಚೆ ಮೂಲಕ ಕಳುಹಿಸಿಕೊಟ್ಟರು . ಶಾಲೆಯ ಪ್ರಾಂಶುಪಾಲರಾದ ಕಾರ್ತಿಕೇಯನ್, ಶಿಕ್ಷಕರಾದ ತೇಜಸ್ವಿ ಕುಮಾರ್, ಅನಿತಾ, ಸುಪ್ರಿಯ ಗೌಸ್ ಅಹಮದ್ ಗಿರೀಶ್ ಹಾಗೂ ಅಂಚೆ ಕಚೇರಿಯ ಪ್ರಭಾರ ಪೋಸ್ಟ್ ಮಾಸ್ಟರ್ ಅನಿತಾ ಹಾಗೂ ಕಚೇರಿ ಸಿಬ್ಬಂದಿಯಾದ ಶಿವಣ್ಣ ಮುಂತಾದವರು ಹಾಜರಿದ್ದರು

ಮೈ ದುಂಬಿಹರಿಯುತಿರುವ ಜಂಬದಹಳ್ಳ ಜಲಾಶಯಕ್ಕೆ ಬಾಗಿನ ಸಮರ್ಪಣೆ

ಮೈ ದುಂಬಿಹರಿಯುತಿರುವ ಜಂಬದಹಳ್ಳ ಜಲಾಶಯಕ್ಕೆ ಶಾಸಕರಾದ G.H ಶ್ರೀನಿವಾಸ ರವರಿಂದ ಬಾಗಿನ ಸಮರ್ಪಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಮುಖಂಡರಾದ ಟಿ. ಎನ್. ಜಗದೀಶ್, ದರ್ಶನ್ duglapura, ರವಿ ಶಾಂತಿಪುರ, ಮತ್ತು ಸಿದ್ದರಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

ದೋರನಾಳು ಗ್ರಾಮದಲ್ಲಿ ಐ.ಡಿ.ಬಿ.ಐ ಬ್ಯಾಂಕ್ ನಿಂದಕೃಷಿ ಸಾಲ ಮೇಳ.

ತರೀಕೆರೆಯ ಐ.ಡಿ.ಬಿ.ಐ ಬ್ಯಾಂಕ್ ವತಿಯಿಂದ ದಿನಾಂಕ 8 12 2025 ರಂದು ದೋರನಾಳು ಗ್ರಾಮ ಬಯಲು ರಂಗ ಮಂದಿರದಲ್ಲಿ ದಲ್ಲಿ ರೈತರಿಗೆ ಕೃಷಿ ಸಾಲ ಮೇಳವನ್ನು ಏರ್ಪಡಿಸಲಾಗಿದೆ ಎಂದು ಐ.ಡಿ.ಬಿ.ಐ ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀ ಶಿವನಗೌಡ ಬಿರಾದರ್ ರವರು ತಿಳಿಸಿದ್ದಾರೆ.  ಕೃಷಿ ಸಾಲ ಮೇಳ ದಲ್ಲಿ ರೈತರಿಗೆ ಆಕರ್ಷಕ ಬಡ್ಡಿ ದರದಲ್ಲಿ ಬೆಳೆ ಸಾಲ, ವಾಹನ ಸಾಲ ,ಉಗ್ರಾಣ ಸಾಲ, ಸಂಸ್ಕರಣ ಘಟಕ ಸಾಲ, ಡೆವಲಪ್ಮೆಂಟ್ ಸಾಲ, ವನ್ನು ಸುಲಭ ಮತ್ತು ತ್ವರಿತ ಗತಿಯಲ್ಲಿ ನೀಡಲಾಗುವುದು ಆಸಕ್ತ ರೈತರು ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

Top week

ಅಪರಾಧ

ತರೀಕೆರೆ ಪೊಲೀಸರ ಕಾರ್ಯಾಚರಣೆ ಇಬ್ಬರು ಮನೆಗಳ್ಳರ ಬಂಧನ.

Admin November 21, 2025 0